ಮೌಂಟ್ ಎವರೆಸ್ಟ್​ ಏರಲು ತೆರಳಿದ್ದ ಭಾರತೀಯ ಮಹಿಳಾ ಆರೋಹಿ ಸಾವು

Prasthutha|

ನೇಪಾಳ: ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್‌ ನ ಬೇಸ್ ಕ್ಯಾಂಪ್‌ನಲ್ಲಿ ಭಾರತೀಯ ಮಹಿಳಾ ಆರೋಹಿಯೊಬ್ಬರು ಗುರುವಾರ (ಮೇ 18) ಸಾವನ್ನಪ್ಪಿದ್ದಾರೆ.

- Advertisement -

59 ವರ್ಷದ ಮಹಿಳಾ ಪರ್ವತಾರೋಹಿಗೆ ಅನಾರೋಗ್ಯದ ಕಾರಣ ಫೇಸ್​ ಮೇಕರ್ ಅಳವಡಿಸಲಾಗಿತ್ತು. ಪೇಸ್ ಮೇಕರ್ ಮೂಲಕ ಮೌಂಟ್ ಎವರೆಸ್ಟ್ ಏರುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಬಯಸಿದ್ದರು. ಮಾಹಿತಿ ನೀಡಿದ ನೇಪಾಳದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಯುವರಾಜ್ ಖತಿವಾಡ, ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರುವ ಮೊದಲು ಸುಝೇನ್ ಲಿಯೋಪೋಲ್ಡಿನಾ ಜೀಸಸ್ ಅವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದರಿಂದಾಗಿ ಅವರನ್ನು ಸೋಲುಕುಂಬು ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಗುರುವಾರ ನಿಧನರಾದರು.

ಐದು ದಿನಗಳ ಮುಂಚಿತವಾಗಿ ನಾವು ಸುಝೇನ್ ಎವರೆಸ್ಟ್​ ಏರುವುದನ್ನು ನಾವು ನಿರಾಕರಿಸಿದ್ದೆವು, ಆದರೆ ಅವರು ಎವರೆಸ್ಟ್ ಹತ್ತಲೇಬೇಕೆನ್ನುವ ಛಲದಲ್ಲಿದ್ದರು. ಹತ್ತುವ ಮುನ್ನ ನಡೆಸಿದ ಕಸರತ್ತಿನಲ್ಲಿ ಸುಝೇನ್ ಪರ್ವತ ಹತ್ತಲು ಯೋಗ್ಯಳಲ್ಲ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಈ ಬಗ್ಗೆ ಅವರು ಪ್ರವಾಸೋದ್ಯಮ ಇಲಾಖೆಗೂ ಪತ್ರ ಬರೆದಿದ್ದರು.

- Advertisement -

ಬೇಸ್ ಕ್ಯಾಂಪ್‌ನಿಂದ ಕೇವಲ 250 ಮೀಟರ್ ಎತ್ತರದಲ್ಲಿರುವ ಕ್ರಾಂಪ್ಟನ್ ಪಾಯಿಂಟ್ ತಲುಪಲು ಸುಝೇನ್​ ಮೊದಲ ಪ್ರಯತ್ನದಲ್ಲಿ 5 ಗಂಟೆಗಳ ಕಾಲ ತೆಗೆದುಕೊಂಡರು. ಅದೇ ಸಮಯದಲ್ಲಿ, ಆರೋಹಿಗಳು ಇಲ್ಲಿಗೆ ತಲುಪಲು ಕೇವಲ 15 ರಿಂದ 20 ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ ಎರಡನೇ ಪ್ರಯತ್ನದಲ್ಲಿ 6 ಗಂಟೆ ಮತ್ತು ಮೂರನೇ ಪ್ರಯತ್ನದಲ್ಲಿ 12 ಗಂಟೆ ತೆಗೆದುಕೊಂಡರು.

ಪೇಸ್‌ಮೇಕರ್‌ನೊಂದಿಗೆ ಮೌಂಟ್ ಎವರೆಸ್ಟ್ ಅನ್ನು ಹತ್ತಿದ ಏಷ್ಯಾದ ಮೊದಲ ಮಹಿಳೆ ಎಂಬ ವಿಶ್ವ ದಾಖಲೆಯನ್ನು ಮಾಡಲು ಬಯಸುವುದಾಗಿ ಅವರು ತಿಳಿಸಿದ್ದರು. ತನ್ನ ಗಂಟಲಿನಲ್ಲಿ ಸಮಸ್ಯೆ ಇದೆ ಮತ್ತು ಆಹಾರವನ್ನು ಸುಲಭವಾಗಿ ನುಂಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದರು.

ಸುಝೇನ್ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಇಂದು (ಶುಕ್ರವಾರ) ಕುಟುಂಬಿಕರು ಕಠ್ಮಂಡು ತಲುಪಲಿದ್ದಾರೆ. ಈ ವರ್ಷ ಮೌಂಟ್ ಎವರೆಸ್ಟ್ ಏರುವಾಗ ಸಂಭವಿಸಿದ 8ನೇ ಸಾವು ಇದಾಗಿದೆ.

Join Whatsapp