ನಕಲಿ ದಾಖಲೆ ಸೃಷ್ಟಿಸಿ ಚರ್ಚ್ ಜಮೀನು ಕಬಳಿಕೆ| ಐವರ ವಿರುದ್ಧ ಪ್ರಕರಣ ದಾಖಲು

Prasthutha|

ಕೊಟ್ಟಾಯಂ: ಚರ್ಚೊಂದರ 28 ಸೆಂಟ್ಸ್ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.

- Advertisement -

ರಾಣಿಪುರಂ ಸೇಂಟ್ ಮೇರಿಸ್ ಕೆನನ್ ಕ್ಯಾಥೋಲಿಕ್ ಚರ್ಚ್‌ನ ಧರ್ಮಗುರು ಕೊಟ್ಟಾಯಂ ಕಿಡಙೂರು ಮೂಲದ ಫಾ| ಜೋಯ್ ಈನು ಕಲ್ಲೆಲ್ ಅವರ ದೂರಿನ ಆಧಾರದಲ್ಲಿ ರಾಜಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐ.ಎಲ್ ಜೋನ್, ದಾಮೋದರನ್ ನಂಬಿಯಾರ್, ವಿ.ಟಿ ಜೋಯ್, ಸಹೋದರರಾದ ಕುಞಂಬು ನಾಯರ್ ಮತ್ತು ರತ್ನಾಕರನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

- Advertisement -

ಇತ್ತೀಚೆಗೆ ಇದೇ ಸ್ಥಳದಲ್ಲಿ ಮರ ಕಡಿದು ಮಾರಾಟ ಮಾಡಿರುವ ಬಗ್ಗೆಯೂ ಪ್ರಕರಣ ದಾಖಲಾಗಿತ್ತು.

Join Whatsapp