ಖಮೀಶ್ ಮುಷಾಯತ್: ಇಂಡಿಯನ್ ಸೋಶಿಯಲ್ ಫೋರಮ್ -ISF ಸೌದಿ ಅರೇಬಿಯಾದ್ಯಂತ ನಡೆಸುತ್ತಿರುವ ಸದಸ್ಯತ್ವ ಅಭಿಯಾನದ ಪ್ರಯುಕ್ತ ISF ಅಸೀರ್ ಪ್ರಾಂತ್ಯದ ಉದ್ಘಾಟನಾ ಕಾರ್ಯಕ್ರಮವು ಖಮೀಶ್ ಮುಷಾಯತ್ ನಲ್ಲಿರುವ ಮುನೀರಾ ಆಡಿಟೋರಿಯಂನಲ್ಲಿ ನಡೆಯಿತು.
ಇಂಡಿಯಾದಲ್ಲಿ ನಡೆಯುತ್ತಿರುವ ಪ್ರಸಕ್ತ ರಾಜಕೀಯ ಸನ್ನಿವೇಶಗಳು ಹಾಗೂ ಈ ಸಂಧರ್ಭದಲ್ಲಿ ISF ನ ಪ್ರತಿಯೋರ್ವ ಕಾರ್ಯಕರ್ತರ ಜವಾಬ್ದಾರಿ ಕುರಿತು ಜಿಝಾನ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಇಕ್ಬಾಲ್ ಕೂಳೂರು ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು.
ವಿವಿಧ ರಾಜಕೀಯ ಪಕ್ಷಗಳಿಂದ ISF ಗೆ ಸೇರ್ಪಡೆಗೊಂಡ ನೂತನ ಸದಸ್ಯರಿಗೆ ರಾಜ್ಯ ಸಮಿತಿಯ ವೆಲ್ಫೇರ್ ಸಂಚಾಲಕ ಹನೀಫಾ ಮಂಜೇಶ್ವರ ಶಾಲು ಹೊದಿಸಿ ಸ್ವಾಗತಿಸಿದರು.
ಕಾರ್ಯಕ್ರಮವನ್ನು ISF ಅಸೀರ್ ರಾಜ್ಯ ಸಮಿತಿ ಅಧ್ಯಕ್ಷ ಹನೀಫಾ ಚಾಳಿಪ್ಪುರಂ ಉದ್ಘಾಟಿಸಿದರು.
ಮುಖ್ಯ ಪ್ರಭಾಷಣ ಮಾಡಿದ ಅನಸ್ ತಿರುನ್ನಾವಾಯ ದೇಶದ ಸಂವಿಧಾನ ಉಳಿಯಬೇಕಾದರೆ ಸ್ವಾತಂತ್ರ್ಯ ಹೋರಾಟಗಾರರ ಜೈಲುವಾಸ, ಸರ್ವಾಧಿಕಾರಿಗಳ ಗುಂಡುಗಳಿಗೆ ದೇಶದ ಎಲ್ಲಾ ಪ್ರಜೆಗಳು ಎದೆಯೊಡ್ಡುವ ಕಾಲ ಮತ್ತೊಮ್ಮೆ ಮರುಕಳಿಸಲಿದೆ ಎಂದರು. ISF ಖಮೀಶ್ ಬ್ಲಾಕ್ ಅಧ್ಯಕ್ಷ ಇಲ್ಯಾಸ್ ಇಡಕ್ಕುನ್ನಂ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಭಾ ಬ್ಲಾಕ್ ಅಧ್ಯಕ್ಷ ಅಬೂಬಕ್ಕರ್ ಸಅದಿ ಸ್ವಾಗತಿದರು.
ಮುನೀರ್ ಚಕ್ಕುವಳ್ಳಿ ನಿರೂಪಿಸಿದ ಕಾರ್ಯಕ್ರಮವನ್ನು ಯೂಸುಫ್ ಚೇಳಾಂಬ್ರ ಧನ್ಯವಾದ ಸಮರ್ಪಿಸಿದರು.