ಮೊರಾಕ್ಕೊ ಗೆ ಅಮೆರಿಕದ ರಾಯಭಾರಿಯಾಗಿ ಭಾರತೀಯ ಮೂಲದ ಪುನೀತ್ ತಲ್ವಾರ್ ನೇಮಕ

Prasthutha|

ವಾಷಿಂಗ್ಟನ್: ಮೊರಾಕ್ಕೊ ದೇಶಕ್ಕೆ ಅಮೆರಿಕದ ರಾಯಭಾರಿಯಾಗಿ ಭಾರತೀಯ ಮೂಲದ ಪುನೀತ್ ತಲ್ವಾರ್ ರನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್ ನೇಮಕ ಮಾಡಿದ್ದಾರೆ.

- Advertisement -

ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನುನಿಭಾಯಿಸಿರುವ ಪುನೀತ್ ತಲ್ವಾರ್, ರಕ್ಷಣಾ ಇಲಾಖೆ, ಶ್ವೇತಭವನ ಹಾಗೂ ಅಮೆರಿಕ ಸೆನೆಟ್ ನಲ್ಲೂ ಉನ್ನತ ಹುದ್ದೆಗಳಲ್ಲಿದ್ದರು. ಪ್ರಸ್ತುತ ಪುನೀತ್ ತಲ್ವಾರ್ ರಕ್ಷಣಾ ಇಲಾಖೆಯ ಹಿರಿಯ ಸಲಹೆಗಾರರಾಗಿ ಕಾರಯನಿರ್ವಹಿಸುತ್ತಿದ್ದಾರೆ.

ವಾಷಿಂಗ್ಟನ್ ನ ಡಿಸಿಯಲ್ಲಿ ಜನಿಸಿರುವ ಅವರು ಕಾರ್ನೆಲ್ ವಿವಿಯಿಂದ ಎಂಜಿನಿಯರಿಂಗ್ನಲಲ್ಲಿ ಬಿಎಸ್ ಪದವಿ ಮತ್ತುಕೊಲಂಬಿಯಾ ವಿವಿಯಿಂದ ಅಂತರರಾಷ್ಟ್ರೀಯ ವ್ಯವಹಾರಗಳ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Join Whatsapp