ಸಿಂಗಾಪುರ ಬುಕ್‌ ಆಫ್‌ ರೆರ್ಕಾಡ್ಸ್‌ಗೆ ಸೇರ್ಪಡೆಗೊಂಡ ಭಾರತೀಯ ತಾಯಿ–ಮಗಳು ಬಿಡಿಸಿದ ರಂಗೋಲಿ

Prasthutha|

- Advertisement -

ಸಿಂಗಾಪುರ: ಭಾರತೀಯ ತಾಯಿ-ಮಗಳು ಬಿಡಿಸಿದ ರಂಗೋಲಿ ಸಿಂಗಾಪುರ ಬುಕ್‌ ಆಫ್‌ ರೆರ್ಕಾಡ್ಸ್‌ಗೆ ಸೇರ್ಪಡೆಗೊಂಡಿದೆ.

26 ಸಾವಿರ ಐಸ್‌ಕ್ರೀಮ್‌ ಕಡ್ಡಿಗಳನ್ನು ಬಳಸಿ 6 ಅಡಿ ಉದ್ದ, 6 ಅಡಿ ಅಗಲದಲ್ಲಿ ತಮಿಳಿನ ಪ್ರಸಿದ್ಧ ಕವಿಗಳಾದ ತಿರುವಾಳ್ಳುವರ್‌, ಅವ್ವಯ್ಯಾರ್‌, ಭಾರತೀಯಾರ್‌ ಹಾಗೂ ಭಾರತೀದಾಸನ್‌ ಅವರ ಚಿತ್ರವನ್ನು ಭಾರತೀಯ ತಾಯಿ–ಮಗಳು ಸೇರಿಕೊಂಡು ಬಿಡಿಸಿದ್ದು, ಅವರು ಬಿಡಿಸಿದ ರಂಗೋಲಿಯು ಈಗ ಸಿಂಗಪುರ ಬುಕ್‌ ಆಫ್‌ ರೆರ್ಕಾಡ್ಸ್‌ಗೆ ಸೇರ್ಪಡೆಗೊಂಡಿದೆ.

- Advertisement -

ತಮಿಳು ಸಾಂಸ್ಕೃತಿಕ ಸಂಘ ‘ಕಲಾಮಂಜರಿ’ ಹಾಗೂ ಲಿಟಲ್‌ ಇಂಡಿಯಾ ಶಾಪ್‌ಕೀಪರ್ಸ್‌ ಆ್ಯಂಡ್‌ ಹೆರಿಟೇಜ್‌ ಅಸೋಸಿಯೇಷನ್‌ ಸಂಘಟನೆ ಸಂಕ್ರಾಂತಿ ಸಂಬಂಧ ಇಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಧಾ ರವಿ ಮತ್ತು ಅವರ ಮಗಳು ಸೇರಿಕೊಂಡು ರಂಗೋಲಿ ಬಿಡಿಸಿದ್ದರು.

ಸುಧಾ ರವಿ ಅವರು ತಮ್ಮ ಮಗಳು ರಕ್ಷಿತಾ ಅವರೊಂದಿಗೆ 2016ರಲ್ಲಿ 3 ಸಾವಿರ ಚದರ ಅಡಿ ಅಳತೆಯಲ್ಲಿ ಬಿಡಿಸಿದ ರಂಗೋಲಿಯೂ ದಾಖಲೆ ಪುಸ್ತಕದ ಪಟ್ಟಿಯಲ್ಲಿದೆ.

Join Whatsapp