‘ಉಸಿರಾಡಲು ಸಾಧ್ಯವಾಗುತ್ತಿಲ್ಲ’ ಎಂಬ ಜಾರ್ಜ್ ಫ್ಲ್ಯಾಯ್ಡ್ ನ ಮಾತು ಇನ್ನಾರು ಆಡದಿರಲಿ: ದೆಹಲಿ ಹೈಕೋರ್ಟ್

Prasthutha|

ವಿಚಾರಣೆಯ ನೆಪದಲ್ಲಿ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯವೆಸಗುವ ಹಕ್ಕನ್ನು ಕಾನೂನು ನೀಡಿಲ್ಲ

- Advertisement -

ನವದೆಹಲಿ: ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಜಾರ್ಜ್ ಫ್ಲ್ಯಾಯ್ಡ್ ನ ಮಾತುಗಳನ್ನು ಇನ್ನಾರು ಆಡದಿರಲಿ ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.

ಯಾವುದೇ ಅಪರಾಧಕ್ಕೆ ಶಿಕ್ಷೆಯನ್ನು ನ್ಯಾಯಾಲಯಗಳು ತೀರ್ಮಾನಿಸುವುದರಿಂದ ಪೊಲೀಸ್ ಠಾಣೆಯಲ್ಲಿ ವಿಚಾರಣೆಯ ನೆಪದಲ್ಲಿ ಸಿಬ್ಬಂದಿಗಳು ಅಥವಾ ಅಧಿಕಾರಿಗಳು ಆರೋಪಿಗಳಿಗೆ ಹಲ್ಲೆ ನಡೆಸಲು ಕಾನೂನು ಅವಕಾಶ ನೀಡುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.

- Advertisement -

ಚಾಂದನಿ ಮಹಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಅಕ್ರಮ ಬಂಧನದಲ್ಲಿರಿಸಿ ಗಂಭೀರವಾಗಿ ಹಲ್ಲೆ ನಡೆಸಿದ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಕೋರಿ ಇಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ದೆಹಲಿ ನ್ಯಾಯಾಲಯ ಈ ಮೇಲಿನಂತೆ ಪ್ರತಿಕ್ರಿಯಿಸಿದೆ.

ಮಾತ್ರವಲ್ಲ ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿದ ಈ ಪ್ರಕರಣವನ್ನು ಮರು ತನಿಖೆಗೆ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ಫೋಟೋಗಳನ್ನು ಪರಿಶೀಲನೆ ನಡೆಸಿದ ನ್ಯಾಯಮೂರ್ತಿ ನಝ್ಮಿ ವಝೀರಿ ಪ್ರತಿಕ್ರಿಯಿಸಿ ‘ಅರ್ಜಿದಾರನ ಮೇಲಿನ ಪೊಲೀಸರ ಹಲ್ಲೆ ಖಂಡನಾರ್ಹ. ಪೊಲೀಸ್ ಠಾಣೆಯಲ್ಲಿ ವಿಚಾರಣೆಯ ನೆಪದಲ್ಲಿ ಹಲ್ಲೆ ನಡೆಸುವ ಹಕ್ಕನ್ನು ಪೊಲೀಸರಿಗೆ ಕಾನೂನು ನೀಡಿಲ್ಲ. ಕಾನೂನು ಪಾಲಕರಿಂದ ನಡೆಯುವ ಈ ರೀತಿಯ ಅತಿರೇಕದ ವರ್ತನೆಯಿಂದ ದುರಂತದ ಸಾಧ್ಯತೆಯಿದೆ. ಇನ್ನು ಮುಂದಕ್ಕೆ ಯಾರು ಕೂಡ ಜಾರ್ಜ್ ಫ್ಲ್ಯಾಯ್ಡ್ ರಂತೆ ಉಸಿರಾಡಲು ಸಾಧ್ಯವಾಗುತ್ತಿಲ ಎಂದು ಹೇಳದಿರಲಿ’ಎಂದು ಅಮೆರಿಕದ ನಡೆದ ದುರ್ಘಟನೆಯನ್ನು ನೆನೆಸುತ್ತಾ ಅವರು ಈ ಹೇಳಿಕೆಯನ್ನು ನೀಡಿದರು.

Join Whatsapp