45 ಪಿಸ್ತೂಲ್’ಗಳೊಂದಿಗೆ ಭಾರತೀಯ ದಂಪತಿ ದೆಹಲಿ ಏರ್ಪೋರ್ಟ್’ನಲ್ಲಿ ಬಂಧನ

Prasthutha|

ನವದೆಹಲಿ: 45 ಪಿಸ್ತೂಲ್’ಗಳನ್ನು ಅಕ್ರಮವಾಗಿ ಸಾಗಿಸಲೆತ್ನಿಸಿದ ಭಾರತೀಯ ದಂಪತಿಯನ್ನು ಕಸ್ಟಮ್ ಅಧಿಕಾರಿಗಳು ಬುಧವಾರ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

- Advertisement -

ಬಂಧಿತ ದಂಪತಿಯನ್ನು ಜಗಜಿತ್ ಸಿಂಗ್ ಮತ್ತು ಜಸ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ.

ಇದು ನಿಜವಾದ ಬಂದೂಕುಗಳೇ ಅಥವಾ ನಕಲಿಯೇ ಎಂಬುದನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ. ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ಭದ್ರತಾ ಪಡೆಯ (ಎನ್.ಎಸ್.ಜಿ) ಅಧಿಕಾರಿಗಳು ಬಂದೂಕುಗಳು ಸಂಪೂರ್ಣವಾಗಿ ನೈಜವಾಗಿ ಕಾಣುತ್ತಿದೆ ಎಂದು ವರದಿ ಮಾಡಿದೆ.

- Advertisement -

ಈ ಮಧ್ಯೆ ಬಂದೂಕು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ರಾಷ್ಟ್ರೀಯ ಭದ್ರತಾ ಪಡೆಯ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ವಲಸೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಕೂಡ ಟರ್ಕಿಯಿಂದ 25 ಪಿಸ್ತೂಲ್‌ಗಳನ್ನು ಭಾರತಕ್ಕೆ ತಂದಿರುವುದಾಗಿ ಇಬ್ಬರೂ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.



Join Whatsapp