ದೇಶದ ಅತಿ ಎತ್ತರದ ವಸತಿ ಕಟ್ಟಡ ಇಂದು ಮಧ್ಯಾಹ್ನ ನೆಲಸಮ !

Prasthutha|

- Advertisement -

ಲಕ್ನೋ: ದೇಶದ ಅತಿ ಎತ್ತರದ ಅವಳಿ ಕಟ್ಟಡ ಭಾನುವಾರ ಮಧ್ಯಾಹ್ನ 2:30ಕ್ಕೆ ನೋಯ್ಡಾ ಪ್ರಾಧಿಕಾರ ಈ ಬೃಹತ್ ಕಟ್ಟಡವನ್ನು ಉರುಳಿಸಲಿದೆ.

ಕೇವಲ 9 ನಿಮಿಷಕ್ಕೆ 900ಕ್ಕೂ ಅಧಿಕ ಮನೆಗಳ ಈ ಅಪಾರ್ಟ್ಮೆಂಟ್ ನೆಲಸಮ ಆಗಲಿದೆ. ಕಟ್ಟಡ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಸೂಪರ್‌ ಟೆಕ್ ಸಂಸ್ಥೆ ನಿರ್ಮಿಸಿರುವ ಈ ಕಟ್ಟಡದ ಧ್ವಂಸಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ 1 ವಾರದಿಂದಲೂ ಕಟ್ಟಡ ಧ್ವಂಸಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ.

- Advertisement -

ಈ ಕಟ್ಟಡಕ್ಕೆ 1,200 ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡಿ 7.5 ಲಕ್ಷ ಚದರ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. 20 ಕೋಟಿ ರೂ. ಖರ್ಚು ಮಾಡಿ ಅದೇ ಕಟ್ಟಡವನ್ನು ಇದೀಗ ಕೆಡವಲಾಗುತ್ತಿದೆ.



Join Whatsapp