►ಜೂನಿಯರ್ ವಿಶ್ವ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಪಡೆದ ಭಾರತದ ಮೊದಲ ಆಟಗಾರ್ತಿ!
ಹೊಸದಿಲ್ಲಿ: ಯುವ ಶಟ್ಲರ್ ಗುಜರಾತ್ ಮೂಲದ ತಸ್ನಿಮ್ ಮಿರ್ ಜೂನಿಯರ್ ವಿಭಾಗದಲ್ಲಿ ವಿಶ್ವದಲ್ಲೇ ನಂ.1 ಪಟ್ಟಕ್ಕೇರಿದ್ದು, ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಭಾರತಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ.
16 ವರ್ಷದ ತಸ್ನಿಮ್ ಮೀರ್ 19 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ನಂಬರ್ 1 ಸ್ಥಾನವನ್ನು ಪಡೆದಿದ್ದು ಮಾತ್ರವಲ್ಲದೆ ಈ ಸಾಧನೆ ಮಾಡಿದ ಭಾರತದ ಮೊದಲ ಅಂಡರ್-19 ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ತಸ್ನಿಮ್ ಮಿರ್ 2017 ರಲ್ಲಿ ಹೈದರಾಬಾದ್ನ ಪುಲ್ಲೇಲಾ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. 2020 ರಲ್ಲಿ ಮಿಶ್ರ ಡಬಲ್ಸ್ ತರಬೇತಿಗಾಗಿ ಗುವಾಹಟಿಯಲ್ಲಿರುವ ಅಸ್ಸೋಂ ಬ್ಯಾಡ್ಮಿಂಟನ್ ಅಕಾಡೆಮಿ ಸೇರಿಕೊಂಡಿದ್ದು, ಪ್ರಸ್ತುತ ಇಲ್ಲಿಯೇ ತರಬೇತಿ ಮುಂದುವರೆಸಿದ್ದಾರೆ.
ತಸ್ನಿಮ್ಗೂ ಮುನ್ನ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾಗಿರುವ ಪಿ ವಿ ಸಿಂಧು ಅಂಡರ್-19 ವಿಭಾಗದಲ್ಲಿ ವಿಶ್ವದ ನಂ.2 ಸ್ಥಾನವನ್ನು ಪಡೆದಿದ್ದರು.
.