ಜಮ್ಮು ಕಾಶ್ಮೀರ: ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನ; ಮುಂದುವರಿದ ರಕ್ಷಣಾ ಕಾರ್ಯಾಚರಣೆ

Prasthutha|

ಜಮ್ಮು: ಉತ್ತರ ಕಾಶ್ಮೀರದ ಬಂಡಿಪುರಾ ಜಿಲ್ಲೆಯ ತುಲೈಲ್ ಸೆಕ್ಟರ್ ನಲ್ಲಿ ಭಾರತೀಯ ಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್’ವೊಂದು ಗಡಿ ನಿಯಂತ್ರಣ ರೇಖೆಯ ಬಳಿ ಪತನಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

- Advertisement -

ಉತ್ತರ ಕಾಶ್ಮೀರದ ಸುಮರು 200 ಕಿ.ಮೀ ದೂರದಲ್ಲಿರುವ ತುಲೈಲ್ ಸಮೀಪದ ಗುಜ್ರಾನ್ ನಲ್ಲಾಹ್ ಎಂಬಲ್ಲಿ ಈ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಅಫಘಾತದ ಸಂದರ್ಭದಲ್ಲಿ ಹೆಲಿಕಾಪ್ಟರ್’ನಲ್ಲಿದ್ದ ಪೈಲಟ್ ಮತ್ತು ಸಹಾಯಕ ಹೊರಗೆಸೆಯಲ್ಪಟ್ಟಿದ್ದು, ಯಾವುದೇ ಸಾವು ನೋವು ನಡೆದಿರುವ ಬಗ್ಗೆ ಮಾಹಿತಿಯಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಹೆಲಿಕಾಪ್ಟರ್ ಸಿಬ್ಬಂದಿ ಮತ್ತು ಹಿಮಭರಿತ ಪ್ರದೇಶದಲ್ಲಿ ದುರಂತಕ್ಕೀಡಾದ ಹೆಲಿಕಾಪ್ಟರ್’ನ ಅವಶೇಷಗಳನ್ನು ಪತ್ತೆಹಚ್ಚಲು ಅಧಿಕಾರಿಗಳು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

- Advertisement -

ಚೀತಾ ಎಂಬುದು ಹೆಚ್ಚಿನ ಕಾರ್ಯಕ್ಷಮತೆಯ ಹೆಲಿಕಾಪ್ಟರ್ ಆಗಿದ್ದು, ಗುರುತ್ವಾಕರ್ಷಣೆಯ ಕೇಂದ್ರ ಮತ್ತು ಎತ್ತರದ ಜಾಗದಲ್ಲಿ ಕಾರ್ಯಾಚರಿಸಲು ವಿನ್ಯಾಸಗೊಳಿಸಲಾಗಿದೆ. ಸದ್ಯ ಚೀತಾ ಹೆಲಿಕಾಪ್ಟರ್ ಐದು ಆಸನಗಳನ್ನು ಹೊಂದಿದ್ದು, ಎಲ್ಲಾ ವಿಧದ ಹೆಲಿಕಾಪ್ಟರ್’ ಗಿಂತಲೂ ಎತ್ತರದಲ್ಲಿ ಹಾರಾಟ ನಡೆಸಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ.

Join Whatsapp