ವಿಶ್ವಸಂಸ್ಥೆ ಬಂದರೂ ಬೆಂಗಳೂರು ಸರಿಯಾಗಲ್ಲ: ಸಚಿವ ಈಶ್ವರಪ್ಪ

Prasthutha|

ಬೆಂಗಳೂರು: ವಿಶ್ವಸಂಸ್ಥೆ ಬಂದರೂ ಬೆಂಗಳೂರನ್ನು ರಿಪೇರಿ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಎಲ್ಲೆಲ್ಲೋ ಮನೆ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಬೆಂಗಳೂರು ರಿಪೇರಿಗೆ ಸಂಪುಟ ಉಪ ಸಮಿತಿ ರಚಿಸಿದ್ದೇವೆ. ಜನರಿಗೆ ಅನುಕೂಲವಾಗುವಂತೆ ಅರಣ್ಯ ಇಲಾಖೆಯ ಜತೆ ಚರ್ಚಿಸಿದ್ದೇವೆ. ಕೆರೆಗಳಿಗೆ ಕೊಳಚೆ ನೀರು ಹೋಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಂಎಲ್ಸಿ ಪಿ.ಆರ್. ರಮೇಶ್ ಪ್ರಶ್ನೆಗೆ ವಿಧಾನಪರಿಷತ್ ನಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಉತ್ತರಿಸಿದ್ದಾರೆ.

- Advertisement -

ಇಂದು ವಿಧಾನ ಪರಿಷತ್ ಕಲಾಪ ನಡೆಯುತ್ತಿದ್ದು ಹಲವು ವಿಚಾರಗಳು ಚರ್ಚೆಯ ಮುನ್ನಲೆಗೆ ಬಂದಿದೆ, ಒಂದೇ ಸಮಯದಲ್ಲಿ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ನಾವು ಸಿದ್ಧರಿದ್ದೇವೆ. ಸೀಮಾ ನಿರ್ಣಯ ಸಮಿತಿ ವರದಿ ನೀಡಿದ ಬಳಿಕ ನಿರ್ಧಾರ ಮಾಡುತ್ತೇವೆ. ವರದಿ ಬರುವವರೆಗೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಇದೇ ಸಂದರ್ಭ ಈಶ್ವರಪ್ಪ ಹೇಳಿದ್ದಾರೆ.

ಸದ್ಯಕ್ಕೆ OBC ಮೀಸಲಾತಿ ಕೊಡುವ ಸ್ಥಿತಿಯಲ್ಲಿ ಇಲ್ಲ, ಈಗಾಗಲೇ ಸುಪ್ರೀಂಕೋರ್ಟ್ SC, ST, ಜನರಲ್ ಕೆಟಗರಿ ಇಟ್ಟುಕೊಂಡು ಚುನಾವಣೆ ನಡೆಸುವಂತೆ ಹೇಳಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಸಭೆ ನಡೆಸಿದ್ದು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಯುತ್ತಿದೆ. ಒಬಿಸಿಗಳಿಗೂ ಆದಷ್ಟು ಬೇಗ ಅವಕಾಶ ನೀಡಿ ಚುನಾವಣೆ ನಡೆಸುವುದಕ್ಕೆ ಪ್ರಯತ್ನಿಸುತ್ತೇವೆ ಎಂದು ಸಚಿವ ಈಶ್ವರಪ್ಪ ಮಾಹಿತಿ ನೀಡಿದ್ದಾರೆ.

Join Whatsapp