ಟೋಕಿಯೋ ಒಲಿಂಪಿಕ್ಸ್-ಹಾಕಿ; ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ಬರೆದ ವನಿತೆಯರು

Prasthutha|

ಟೋಕಿಯೋ, ಆ.2; ಟೋಕಿಯೋ ಒಲಿಂಪಿಕ್ಸ್ ನ ವನಿತೆಯರ ಹಾಕಿಯಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡ ಇತಿಹಾಸ ಬರೆದಿದೆ.

- Advertisement -


ಕ್ವಾರ್ಟರ್ ಫೈನಲ್ ನಲ್ಲಿ ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯ ಸಾಧಿಸಿದ ಭಾರತೀಯ ವನಿತೆಯರು, ಆ ಮೂಲಕ ಒಲಿಂಪಿಕ್ಸ್ ಟೂರ್ನಿಯ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿದರು.
ಪಂದ್ಯದ 22 ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಸಾಹಸದಲ್ಲಿ ದಾಖಲಾದ ಗೋಲು ಅದ್ವಿತೀಯ ಸಾಧನೆಗೆ ಕಾರಣವಾಯಿತು.
ಬುಧವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಅರ್ಜೆಂಟೀನಾ ತಂಡದ ಸವಾಲನ್ನು ಎಸುರಿಸಲಿದೆ.


ಮತ್ತೊಂದೆಡೆ ನಾಳೆ ನಡೆಯಲಿರುವ ಪುರುಷರ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.

Join Whatsapp