ರೂಪಾಯಿ, ದಿರ್ಹಮ್‌ ವ್ಯವಹಾರಕ್ಕೆ ಭಾರತ, ಯುಎಇ ಒಪ್ಪಿಗೆ

Prasthutha|

ಅಬುಧಾಬಿ: ಭಾರತ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಇನ್ನು ಮುಂದೆ ರೂಪಾಯಿ – ದಿರ್ಹಮ್‌ನಲ್ಲಿ ವ್ಯವಹಾರ ನಡೆಸಲು ಪರಸ್ಪರ ಸಹಿ ಹಾಕಿವೆ.

- Advertisement -

ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಸಮ್ಮುಖದಲ್ಲಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಮತ್ತು ಯುಎಇಯ ಸೆಂಟ್ರಲ್ ಬ್ಯಾಂಕ್ ಗವರ್ನರ್ ಹೆಚ್ ಇ ಖಲೀದ್ ಮೊಹಮದ್ ತಿಳುವಳಿಕಾ ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

ಈ ಒಪ್ಪಂದದಿಂದ ಭಾರತ ಮತ್ತು ಯುಎಇ ಇನ್ನು ಮುಂದೆ ರಫ್ತು ಮತ್ತು ಆಮದನ್ನು ದೇಶಿಯ ಕರೆನ್ಸಿಯಲ್ಲಿ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿರುವ ಪಾವತಿ ವ್ಯವಸ್ಥೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಮತ್ತು ಯುಎಇಯ ಸುರಕ್ಷಿತ ಆನ್‌ಲೈನ್ ಪಾವತಿ ವ್ಯವಸ್ಥೆಯಾದ ಐಪಿಪಿ (IPP) ಇನ್ನು ಮುಂದೆ ಲಿಂಕ್‌ ಆಗಲಿದೆ.

- Advertisement -

UPI-IPP ಸಂಪರ್ಕವು ಎರಡೂ ದೇಶದ ಬಳಕೆದಾರರಿಗೆ ವೇಗವಾಗಿ, ಅನುಕೂಲಕರ, ಸುರಕ್ಷಿತವಾಗಿ ಪರಿಣಾಮಕಾರಿ ಎರಡು ದೇಶಗಳ ಮಧ್ಯೆ ಹಣ ವರ್ಗಾವಣೆ ಮಾಡಲು ಅನುವು ಮಾಡಿಕೊಡುತ್ತದೆ.

ಲಾಭ ಏನು?

ಎರಡು ದೇಶಗಳ ನಡುವಿನ ಚಿಲ್ಲರೆ ಪಾವತಿಗಳು ಸಾಮಾನ್ಯವಾಗಿ ಕಡಿಮೆ ಪಾರದರ್ಶಕವಾಗಿರುತ್ತವೆ ಮತ್ತು ಇದು ದೇಶೀಯ ವಹಿವಾಟುಗಳಿಗಿಂತ ಹೆಚ್ಚು ದುಬಾರಿ. UPI-IPP ಲಿಂಕ್‌ ಆದರೆ ಭಾರತ ಮತ್ತು ಫ್ರಾನ್ಸ್‌ ನಡುವಿನ ಗಡಿಯಾಚೆಗಿನ ಹಣ ವ್ಯವಹಾರ ಪಾರದರ್ಶಕವಾಗಿರುತ್ತದೆ. ಅಷ್ಟೇ ಅಲ್ಲದೇ ಅಗ್ಗ ಮತ್ತು ವೇಗವಾಗಿ ಹಣವನ್ನು ಕಳುಹಿಸಬಹುದಾಗಿದೆ. ಯುಎಇಯಲ್ಲಿರುವ ಭಾರತೀಯ ವಲಸಿಗರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ಲಾಭವಾಗಲಿದೆ. ಯುಪಿಐ ಮೂಲಕ ಚಿಲ್ಲರೆ ಪಾವತಿಗಳನ್ನು ಭಾರತೀಯ ರೂಪಾಯಿಗಳಲ್ಲಿ ಮಾಡಲಾಗುವುದರಿಂದ ಇದು ವಿದೇಶೀ ವಿನಿಮಯ ಮೀಸಲುಗಳನ್ನು ಉಳಿಸಲು ಸಹಾಯ ಮಾಡುತ್ತದೆ.

Join Whatsapp