ದುಬೈಗೆ ಹಿಂದಿರುಗಲು ಭಾರತ-ಯುಎಇ ಚಾರ್ಟರ್‌ ಜೆಟ್‌ ಗೆ 55 ಲಕ್ಷ ರೂ. ವೆಚ್ಚ ಮಾಡಿದ NRI

Prasthutha|

ನವದೆಹಲಿ : ದುಬೈ ಮೂಲದ ಎನ್‌ ಆರ್‌ ಐಯೊಬ್ಬರು ತಮ್ಮ ಕುಟುಂಬದೊಂದಿಗೆ ಯುಎಇಗೆ ಮರಳಲು ವಿಶೇಷ ಚಾರ್ಟರ್‌ ವಿಮಾನಕ್ಕೆ 55 ಲಕ್ಷ(2,77,೦೦೦ ಧಿರಂ) ರೂ. ವೆಚ್ಚ ಮಾಡಿದ ಘಟನೆ ವರದಿಯಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿಭಾರತ-ಯುಎಇ ಪ್ರಯಾಣ ರದ್ದಾಗಿರುವುದರಿಂದ ತವರಿನಲ್ಲೇ ಸಿಲುಕಿಕೊಂಡಿದ್ದ ಉದ್ಯಮಿ ಕುಟುಂಬ ಯುಎಇಗೆ ಮರಳಲು ಇಷ್ಟು ದೊಡ್ಡ ವೆಚ್ಚದ ಪ್ರಯಾಣವನ್ನು ಮಾಡಿದೆ.

- Advertisement -

ಔದ್‌ ಅಲ್‌ ಅನ್ಫರ್‌ ಪರ್ಫ್ಯೂಮ್‌ ಬ್ರಾಂಡ್‌ ನ ಮಾಲಕರಾಗಿರುವ ಮುಶ್ತಾಕ್‌ ಅನ್ಫರ್‌ ಚಾರ್ಟರ್‌ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೊವನ್ನು ಇನ್ಸ್‌ ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಉದ್ಯಮಿಯು ತನ್ನ ತಾಯಿಯೊಂದಿಗೆ ಸಮಯ ಕಳೆಯುವುದಕ್ಕಾಗಿ ಭಾರತಕ್ಕೆ ಆಗಮಿಸಿದ್ದರು. ಇದಕ್ಕೂ ಮೊದಲು ಕಳೆದ ತಿಂಗಳು ಮತ್ತೊಂದು ಭಾರತದ ಕುಟುಂಬ ಇದೇ ರೀತಿಯ ಪ್ರಯಾಣಕ್ಕೆ 2 ಲಕ್ಷ ಧಿರಂ ವೆಚ್ಚ ಮಾಡಿದುದು ವರದಿಯಾಗಿತ್ತು.



Join Whatsapp