ಹೊಸದಿಲ್ಲಿ: ಮುಂದಿನ ವರ್ಷದ ಮಾರ್ಚ್ ಅವಧಿಯಲ್ಲಿ ಭಾರತದ ತಲಾ ಒಟ್ಟು ದೇಶೀಯ ಉತ್ಪಾದನೆಯು (ಜಿಡಿಪಿ) 10.3% ಕುಸಿಯಲಿದೆ. ಅದೇವೆಳೆ, ಬಾಂಗ್ಲಾ ದೇಶವು ತನ್ನ ಜಿಡಿಪಿಯನ್ನು 3.8% ಹೆಚ್ಚಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.
ಕೊರೋನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತವು ಹೊಸ ಮಾರುಕಟ್ಟೆಗಳ ದೊಡ್ಡ ಕುಸಿತವನ್ನು ಎದುರಿಸಲಿದೆ.
ಇದರೊಂದಿಗೆ ಭಾರತವು ದಕ್ಷಿಣ ಏಷ್ಯಾದಲ್ಲಿ ಮೂರನೆ ಅತೀ ಬಡ ರಾಷ್ಟ್ರವಾಗಲಿದೆ. ಪಾಕಿಸ್ತಾನ ಮತ್ತು ನೇಪಾಳ ಭಾರತಕ್ಕಿಂತ ಕಡಿಮೆ ಜಿಡಿಪಿ ಯ ರಾಷ್ಟ್ರವಾಗಿರಲಿದೆ. ಬಾಂಗ್ಲಾ ದೇಶ, ಭೂತಾನ್, ಶ್ರೀಲಮ್ಕಾ ಮತ್ತು ಮಾಲ್ದೀವ್ಸ್ ಭಾರತಕ್ಕಿಂತ ಮುಂದಿದೆ. ಭಾರತದ ಬಳಿಕ ಶ್ರೀಲಂಕಾವು ಹೆಚ್ಚಿನ ಪರಿಣಾಮವನ್ನು ಪಡೆಯಲಿದೆ. ಶ್ರೀಲಂಕಾದ ತಲಾ ಜಿ.ಡಿ.ಪಿ 4.6% ದುರ್ಬಲಗೊಳ್ಳಲಿದೆ.