October 14, 2020

“ಬಾಂಗ್ಲಾ ಭಾರತವನ್ನು ಹಿಂದಿಕ್ಕಲಿದೆ: ಇದುವೇ ಬಿಜೆಪಿ ಸಾಧನೆ” – ರಾಹುಲ್ ಗಾಂಧಿ

ಹೊಸದಿಲ್ಲಿ: ಆರ್ಥಿಕತೆಯ ಕಳಪೆ ನಿರ್ವಹಣೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ.

ಜಿ.ಎಸ್.ಟಿ ಪರಿಹಾರ, ಕೋವಿಡ್ 19, ಆರ್ಥಿಕತೆ, ಕಾರ್ಪೊರೇಟ್ ತೆರಿಗೆಗೆ ಕತ್ತರಿ ಮತ್ತು ರಾಜ್ಯಗಳು ಸಾಲ ಪಡೆಯುವ ಕುರಿತಂತೆ ರಾಹುಲ್ ಗಾಂಧಿಯವರು ಸೋಮವಾರದಂದು ಪ್ರಧಾನಿಯನ್ನು ಟೀಕೆಗೆ ಗುರಿಪಡಿಸಿದ್ದಾರೆ.

ತಲಾ ಆದಾಯದಲ್ಲಿ ಭಾರತವನ್ನು ಬಾಂಗ್ಲಾವು ಹಿಂದಿಕ್ಕುವ ಕುರಿತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯು ನೀಡಿದ ಮುನ್ಸೂಚನೆಯ ಬಳಿಕ ಅವರು ಕೇಂದ್ರವನ್ನು ಗುರಿಪಡಿಸಿದ್ದಾರೆ. ಐಎಂಎಫ್ ನ ವರದಿಯ ಆಧಾರದ ಮೇಲೆ ತಯಾರಿಸಲಾದ ನಕ್ಷೆಯೊಂದನ್ನು ಅವರು ಬುಧವಾರ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

 “ ಬಿಜೆಪಿಯ ದ್ವೇಷಪೂರಿತ ಸಾಂಸ್ಕೃತಿಕ ರಾಷ್ಟ್ರೀಯವಾದದ ಆರು ವರ್ಷಗಳ ಬಹುದೊಡ್ಡ ಸಾಧನೆಯಾಗಿದೆ: ಬಾಂಗ್ಲಾ ದೇಶವು ಭಾರತವನ್ನು ಹಿಂದಿಕ್ಕುವುದರಲ್ಲಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಟಾಪ್ ಸುದ್ದಿಗಳು

ವಿಶೇಷ ವರದಿ