ಅ.15ರಿಂದ ಭಾರತದ ವೀಸಾ ವಿದೇಶಿಯರಿಗೆ ಲಭ್ಯ | ಪ್ರವಾಸಿಗರಿಗೆ ಭಾರತೀಯ ತಾಣಗಳು ಮುಕ್ತ

Prasthutha|

ನವದೆಹಲಿ: ಕೊರೋನಾ ಕಾರಣದಿಂದ ಕಳೆದ 19 ತಿಂಗಳಿನಿಂದ ಸ್ಥಗಿತಗೊಳಿಸಲಾಗಿದ್ದ ಭಾರತೀಯ ಪ್ರವಾಸಿ ವೀಸಾವನ್ನು ಅಕ್ಟೋಬರ್ 15ರಿಂದ ಪುನರಾರಂಭಿಸುವುದಾಗಿ ಭಾರತೀಯ ಗೃಹ ಸಚಿವಾಲಯವು ಗುರುವಾರ ಪ್ರಕಟಿಸಿದೆ. ಈ ಕಾರಣ ಭಾರತದ ನೆಚ್ಚಿನ ತಾಣಗಳು ಪ್ರವಾಸಿಗರಿಗೆ ಹಂತ ಹಂತವಾಗಿ ಮುಕ್ತಗೊಳ್ಳಲಿವೆ ಎಂದು ತಿಳಿಸಿದೆ.

- Advertisement -

ಚಾರ್ಟಡ್ ವಿಮಾನಗಳ ಮೂಲಕ ಆಗಮಿಸುವ ಪ್ರವಾಸಿಗರಿಗೆ ಇದೇ 15ರಿಂದ ವೀಸಾ ನೀಡಲಾಗುತ್ತದೆ, ಅಲ್ಲದೇ ಚಾರ್ಟಡ್ ವಿಮಾನ ಹೊರತುಪಡಿಸಿ ಬೇರೆ ವಿಮಾನಗಳ ಮೂಲಕ ಆಗಮಿಸುವ ಪ್ರಯಾಣಿಕರಿಗೆ ನವೆಂಬರ್ 15ರ ನಂತರ ವೀಸಾ ನೀಡಲಾಗುತ್ತದೆ ಎಂದು ತಿಳಿಸಿದೆ.

ಆರೋಗ್ಯ ಸಚಿವಾಲಯ ಕಾಲದಿಂದ ಕಾಲಕ್ಕೆ ಪ್ರಕಟಿಸಿರುವ ಕೋವಿಡ್-19ಗೆ ಸಂಬಂಧಿಸಿದ ಎಲ್ಲಾ ಮಾರ್ಗಸೂಚಿಗಳು ಮತ್ತು ನಿಯಮಾವಳಿಗಳನ್ನು ವಿಮಾನಗಳಲ್ಲಿ ಆಗಮಿಸುವ ಪ್ರವಾಸಿಗರು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ ಎಂದು ಗೃಹ ಸಚಿವಾಲಯದ ಪ್ರಕಟಣೆಯಲ್ಲಿ ಹೇಳಿದೆ.



Join Whatsapp