ದಕ್ಷಿಣ ಅಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯ| ಭಾರತದ ಗೆಲುವಿಗೆ 107 ರನ್‌ ಗುರಿ

Prasthutha|

ತಿರುವನಂತಪುರಂ: 3ನೇ ಓವರ್‌ನಲ್ಲಿ 9 ರನ್‌ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡು ಇನ್ನೇನು ಅಲ್ಪಮೊತ್ತಕ್ಕೆ ಇನ್ನಿಂಗ್ಸ್‌ ಮುಗಿಸುವ ಸೂಚನೆ ನೀಡಿದ್ದ ಆಫ್ರಿಕಾ, ಅಂತಿಮವಾಗಿ ನಿಗಧಿತ 20 ಓವರ್‌ ಬ್ಯಾಟಿಂಗ್‌ ಮಾಡುವಲ್ಲಿ ಯಶಸ್ವಿಯಾಗಿದ್ದು, 8 ವಿಕೆಟ್‌ ನಷ್ಟದಲ್ಲಿ 106 ರನ್‌ಗಳಿಸಿದೆ. ತಿರುವನಂತಪುರಂನ ಗ್ರೀನ್‌ ಫೀಲ್ಡ್‌ ಸ್ಟೇಡಿಯಂನಲ್ಲಿಟಾಸ್‌ ಗೆದ್ದ ರೋಹಿತ್‌ ಶರ್ಮಾ, ಪ್ರವಾಸಿ ತಂಡವನ್ನು ಬ್ಯಾಟಿಂಗ್‌ ಆಹ್ವಾನಿಸಿತ್ತು. ಭಾರತದ ಪರ ಬೌಲಿಂಗ್‌ ದಾಳಿ ಆರಂಭಿಸಿದ್ದ ದೀಪಕ್‌ ಚಹಾರ್‌ ಮತ್ತು ಅರ್ಷ್‌ದೀಪ್‌ ಸಿಂಗ್‌, ತಮಗೆ ದೊರೆಕಿದ ಅವಕಾಶವನ್ನು ಅತ್ಯುತ್ತಮವಾಗಿಯೇ ಬಳಸಿಕೊಂಡರು.

- Advertisement -

ಅರ್ಷ್‌ದೀಪ್‌ ತಾವು ಎಸೆದ ಮೊದಲ ಓವರ್‌ನಲ್ಲೇ (ಇನ್ನಿಂಗ್ಸ್‌ನ ಎರಡನೇ ಓವರ್‌) ಮೂರು ವಿಕೆಟ್‌ ಪಡೆಯುವ ಮೂಲಕ ಆರಂಭದಲ್ಲೇ ಆಫ್ರಿಕಾಗೆ ಆಘಾತವಿಕ್ಕಿದರು.  ದೀಪಕ್‌ ಚಾಹರ್‌ ಮೊದಲನೇ ಮತ್ತು ಎರಡನೇ ಓವರ್‌ನಲ್ಲಿ ತಲಾ ಒಂದು ವಿಕೆಟ್‌ ಪಡೆದರು. ಆ ಮೂಲಕ ತೆಂಬಾ ಬವುಮಾ ಪಡೆ 2.3 ಓವರ್‌ಗಳಲ್ಲಿ 9 ರನ್‌ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.

ಆದರೆ ಆ ಬಳಿಕ ಏಡೆನ್‌ ಮಾರ್ಕಮ್‌ (25 ರನ್‌), ಬೌಲರ್‌ಗಳಾದ ವೇಯ್ನ್‌ ಪಾರ್ನೆಲ್‌ 24 ರನ್‌ ಹಾಗೂ ಕೇಶವ್‌ ಮಹಾರಾಜ್‌41 ರನ್‌ಗಳಿಸಿ ತಂಡವು ಮೂರಂಕಿಯ ಮೊತ್ತವನ್ನು ದಾಟುವಲ್ಲಿ ಜೊತೆಗೂಡಿದರು. ಅರ್ಷದೀಪ್‌ ಸಿಂಗ್‌ 3 ವಿಕೆಟ್‌, ದೀಪಕ್‌ ಚಹಾರ್‌ ಮತ್ತು ಹರ್ಷಲ್‌ ಪಟೇಲ್‌ ತಲಾ 2 ವಿಕೆಟ್‌ ಪಡೆದರು. ಅಕ್ಷರ್‌ ಪಟೇಲ್‌ 1 ವಿಕೆಟ್‌ ಪಡೆದರು.

Join Whatsapp