ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಝಿಲಂಡ್ ನಡುವಿನ ಎರಡನೇ ಟೆಸ್ಟ್’ನ ದ್ವಿತೀಯ ದಿನದಾಟದಲ್ಲಿ ಅತಿಥೇಯ ಭಾರತ ಬೃಹತ್ ಮುನ್ನಡೆ ಸಾಧಿಸಿದೆ.
ಭಾರತದ ಬೌಲರ್ ಗಳ ಮುಂದೆ ರನ್ ಗಳಿಸಲು ಪರದಾಡಿದ ನ್ಯೂಝಿಲಂಡ್ ದಾಂಡಿಗರು 62 ರನ್ ಗಳಿಗೆ ಆಲೌಟ್ ಆಗಿದ್ದಾರೆ. ಈ ಮೂಲಕ ಭಾರತ 263 ರನ್’ಗಳ ಬೃಹತ್ ಮುನ್ನಡೆ ಪಡೆದಿದ್ದು, ಪ್ರವಾಸಿಗರ ಮೇಲೆ ಫಾಲೋ ಆನ್ ಹೇರಿದೆ. ಆ ಮೂಲಕ ನ್ಯೂಝಿಲಂಡ್ ಎರಡನೇ ಇನ್ನಿಂಗ್ಸ್ ಆರಂಭಿಸಲಿದೆ.
ಮೊದಲ ಇನ್ನಿಂಗ್ ನಲ್ಲಿ ಭಾರತ ತಂಡದ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಅವರ ಶತಕ ಸಾಧನೆಯ ನಂತರ 325 ರನ್ ಗಳಿಗೆ ಆಲೌಟ್ ಆಗಿತ್ತು. ನ್ಯೂಝಿಲಂಡ್ ನ ಎಡಗೈ ಸ್ಪಿನ್ನರ್ ಅಜಾಝ್ ಪಟೇಲ್ ಭಾರತದ ಎಲ್ಲಾ 10 ವಿಕೆಟ್ ಗಳನ್ನು ಪಡೆದು ದಾಖಲೆ ನಿರ್ಮಿಸಿದ್ದರು.
ತನ್ನ ಪಾಳಿಯ ಪ್ರಥಮ ಇನ್ನಿಂಗ್ ಆರಂಭಿಸಿದ ನ್ಯೂಝಿಲಂಡ್’ಗೆ ಭಾರತದ ವೇಗಿ ಮುಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದ್ದರು. 17 ರನ್ ಗಳಿಸುವಷ್ಟರಲ್ಲಿ ಪ್ರವಾಸಿಗರು ತಮ್ಮ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ಆ ಬಳಿಕ ಸ್ಪಿನ್ನರ್ ಅಶ್ವಿನ್ ಕೂಡಾ ನ್ಯೂಝಿಲಂಡ್ ದಾಂಡಿಗರನ್ನು ಕಾಡಿದ್ದರು. ಕೊನೆಗೆ ನ್ಯೂಝಿಲಂಡ್ 62 ರನ್ ಗಳಿಗೆ ಆಲೌಟ್ ಆಗಿ ಭಾರತಕ್ಕೆ 263 ರನ್ ಗಳ ಮುನ್ನಡೆ ಬಿಟ್ಟುಕೊಟ್ಟಿದೆ