ಉಡುಪಿಯಲ್ಲಿ ಭೀಮ್ ಜಯಂತ್ಯುತ್ಸವ

Prasthutha|

ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದಲ್ಲಿ ಭೀಮ್ ಜಯಂತ್ಯುತ್ಸವ ದಸಂಸ ಭೀಮ ವಾದದ ರಾಜ್ಯ ಸಂಘಟನಾ ಸಂಚಾಲಕ ಶೇಖರ್ ಹಾವಂಜೆ ಅವರ ಮನೆಯಲ್ಲಿ ನಡೆಯಿತು.

- Advertisement -

ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ, ಉಡುಪಿ ಜಿಲ್ಲಾ ಸಮಿತಿಯಿಂದ ಬುದ್ದವಂದನೆ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕುರಿತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಮುಖ್ಯಭಾಷಣಕಾರರಾಗಿ ಆಗಮಿಸಿದ್ದರು.

- Advertisement -

ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರೆ ನಾವು ಇಂದು ಸ್ಮರಣೆ ಮಾಡುವ ಅಗತ್ಯವೇ ಇರಲಿಲ್ಲ. ಹಾಗೆಯೇ ಇವರು ಸಾರ್ವತ್ರಿಕ ನೆಲೆಯಲ್ಲಿ ಭಾರತೀಯರ ಸ್ಮರಣೆಯಲ್ಲಿಯೂ ಉಳಿಯುತ್ತಿರಲಿಲ್ಲ. ಆದರೆ ಭಾರತದ ಪ್ರತಿಯೊಬ್ಬ ಪ್ರಜೆಯು ಇಂದು ಬಾಬಾಸಾಹೇಬರನ್ನು ಸ್ಮರಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರೆ ಅದಕ್ಕೆ ಕಾರಣ ಈ ನಿಸ್ವಾರ್ಥ ವ್ಯಕ್ತಿತ್ವದ ಹಿರಿಮೆಯ ಪ್ರತೀಕವೇ ಸರಿ ಎಂದರು.

ಭಾರತೀಯರಾದ ನಾವು ಎಪ್ಪತ್ತು-ಎಂಬತ್ತು ವರ್ಷಗಳ ಹಿಂದಿನ ಭಾರತವನ್ನು ಒಂದು ಕ್ಷಣ ಸ್ಮರಿಸಿಕೊಂಡರೆ ನಮಗೆ ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಭೀಮಶಕ್ತಿಯ ಸಾಹಸಮಯ ಹೋರಾಟದ ಬದುಕು ಅರ್ಥವಾಗುತ್ತದೆ ಎಂದು ಅವರು ಹೇಳಿದರು.

ಇಂದು ಹಿಂದುತ್ವದ ಹೆಸರಿನಲ್ಲಿ ಕೋಮುವಾದಿಗಳ ಕೈಗೊಂಬೆಯಾಗಿ ಕುಣಿಯುತ್ತ, ಈ ನೆಲದ ಸಾಮರಸ್ಯವನ್ನು ತಮ್ಮ ಕೈಯಾರೆ ಕೆಡಿಸುತ್ತಿರುವ ಶೂದ್ರ ಯುವ ಸಮುದಾಯವು ಒಂದು ಕ್ಷಣ ಎಂಬತ್ತು ವರ್ಷಗಳ ಹಿಂದಿನ ತಮ್ಮ ಪೂರ್ವಜರ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡರೆ ಬ್ರಾಹ್ಮಣ್ಯದ ತಾಳಕ್ಕೆ ಕುಣಿಯುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಒಬ್ಬ ಮುಂದುವರೆದ ಜಾತಿಯ ಶೂದ್ರನನ್ನು ಅಂಬೇಡ್ಕರ್ ಯಾರು ಎಂದು ಕೇಳಿದರೆ ಅವನ ಬಾಯಿಯಿಂದ ಸಹಜವಾಗಿಯೇ ಹೊರಹೊಮ್ಮುವ ಮಾತು ಅವರೊಬ್ಬ ‘ಹೊಲೆಯ ಮಾದಿಗ’ ಸಮುದಾಯದ ನಾಯಕ ಎಂಬುದೇ ಆಗಿರುತ್ತದೆ. ಆದರೆ ಈ ಭೀಮ ಶಕ್ತಿ ನನಗೆಷ್ಟು ಸ್ವಾಭಿಮಾನ, ಸ್ವಾವಲಂಬನೆಯನ್ನು ಕಲ್ಪಿಸಿಕೊಟ್ಟಿದೆ ಎಂಬ ಅರಿವು ಶೂದ್ರರಿಗೆ ಇಲ್ಲವಾಗಿದೆ. ಇದು ಆ ವ್ಯಕ್ತಿ ಅಥವಾ ಸಮುದಾಯದ ತಪ್ಪಲ್ಲ ಎಂದು ಹೇಳಿದರು.

ಅವರ ತಲೆಯೊಳಗೆ ಅಂಬೇಡ್ಕರ್ ಎಂಬ ಶಕ್ತಿಯ ಬಗ್ಗೆ ಮೂಲಭೂತವಾದಿಗಳು ತುಂಬಿರುವ ಹುಸಿ ಹುನ್ನಾರಗಳಿವು. ಅಂಬೇಡ್ಕರ್ ಎಂಬ ಈ ವ್ಯಕ್ತಿತ್ವ ಭಾರತದ ನೆಲದಲ್ಲಿ ಜನ್ಮತಳೆಯದೆ ಹೋಗಿದ್ದರೆ ನಾವೆಲ್ಲ ಶಿಕ್ಷಣ, ರಾಜಕೀಯ, ಅಧಿಕಾರದಿಂದ ಹೊರಗುಳಿದು ಜೀತ ಮಾಡಬೇಕಾದ ಪರಿಸ್ಥಿತಿ ಇನ್ನೂ ಜೀವಂತವಾಗಿರುತ್ತಿತ್ತು ಎಂಬುದು ಶೂದ್ರ ಸಮುದಾಯಗಳಿಗೆ ಅರ್ಥವಾಗಿಯೇ ಇಲ್ಲ ಎಂದು ಹೇಳಿದರು

ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ನೂರ್ ಜುಮ್ಮಾ ಮಸ್ಜಿದ್ ಕುಂಜಾಲು, ಮುಹಮ್ಮದ್ ಶಫೀಕ್ ನಿಜಾಮಿ ಖತೀಜರು ಮತ್ತು ಧರ್ಮ ಗುರುಗಳು ಸೇಕ್ರೇಟ್ ಹಾರ್ಟ್ ಚರ್ಚ್ ಕೊಳಲಗಿರಿ, ಅನಿಲ್ ಪ್ರಕಾಶ್ ಕ್ಯಾಸ್ತೋಲಿನ್ ಹಾಗೂ ಸುರೇಶ್ ಬಿ ಶೆಟ್ಟಿ ಇರ್ಮಾಡಿ ಆಡಳಿತ ಮುಕ್ತೇಸರು,ಮಹಾಲಿಂಗೇಶ್ವರ ದೇವಸ್ಥಾನ ಹಾವಂಜೆ ಕಾರ್ಯಕ್ರಮದ ಅದ್ಯಕ್ಷತೆಯನ್ನು ರಾಜ್ಯಖಜಾಂಜಿ ಕದಸಂಸ ಭೀಮವಾದ ಕರ್ನಾಟಕ, ಎಸ್ ಡಿ ರಾಯಮಾನೆ ವಹಿಸಿದ್ದರು.

ರಾಜ್ಯ ಸಂಘಟನಾ ಸಂಚಾಲಕರು ಕದಸಂಸ ಭೀಮವಾದ ಉಡುಪಿ, ಶೇಖರ್ ಹಾವಂಜೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಗೋವರ್ಧನ ಗಿರಿಶ್ಯಾಮ್. ಎನ್. ಆರ್. ಸಂಪಾದಕರು, ಸುದ್ದಿ ದಿನ ದಿನಪತ್ರಿಕೆ, ದಾವಣಗೆರೆ, ರಮೇಶ್ ಹರಿಖಂಡಿಗೆ, ಜಿಲ್ಲಾ ಸಂಚಾಲಕರು ಕದಸಂಸ ಭೀಮವಾದ (ರಿ) ಉಡುಪಿ ಜಿಲ್ಲೆ ,ಗೋಪಾಲ್ ಇಸರ್ ಮಾರ್, ಜಿಲ್ಲಾಧ್ಯಕ್ಷರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಉಡುಪಿ ಜಿಲ್ಲೆ, ಸತೀಶ್ ಶೆಟ್ಟಿ ಮುಂಗನ್ ಬೆಟ್ಟು, ಉದ್ಯಮಿಗಳು ಹಾಗೂ  ಮಾಜಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಸಮಿತಿ ಹಾವಂಜೆ,  ವಿ ಮಂಜುನಾಥ್ ವಕೀಲರು ಉಡುಪಿ, ಉದಯ ಕುಮಾರ್ ಮಣೂರು, ಹಿರಿಯ ವಕೀಲರು ಉಡುಪಿ, ಸತೀಶ್ ಪೂಜಾರಿ ಬಾರ್ಕೂರು, ಅಧ್ಯಕ್ಷರು ಬ್ರಹ್ಮಾವರ ತಾಲೂಕು ಹೋರಾಟ ಸಮಿತಿ ಉಡುಪಿ ಜಿಲ್ಲೆ, ಸದಾಶಿವ ಶೆಟ್ಟಿ ಹೇರೂರು, ಅಧ್ಯಕ್ಷರು ಉಡುಪಿ ಜಿಲ್ಲಾ ಆರ್ ಟಿ ಐ ಮತ್ತು ಸಾಮಾಜಿಕ ಹೋರಾಟ ಸಮಿತಿ, ಹಬೀಬ್ ಉಡುಪಿ ಸಾಮಾಜಿಕ ಕಾರ್ಯಕರ್ತರು, ಅಬ್ಬಾಸ್ ಸಾಹೇಬ್ ಗೋಳಿಕಟ್ಟೆ ಹಿರಿಯರು ಮುಗೇರಿ ಹಾವಂಜೆ, ಉದಯ ಕೋಟ್ಯಾನ್, ಸದಸ್ಯರು ಹಾವಂಜೆ ಗ್ರಾಮ ಪಂಚಾಯತ್, ರತ್ನಾಕರ ಮೊಗವೀರ, ಮೊಗವೀರ ಸಂಘಟನೆ ಉಡುಪಿ ಅಶ್ವಿನ್ ರೋಚ್ ಕೊಳಲಗಿರಿ, ಸದಸ್ಯರು ಉಪ್ಪೂರು ಗ್ರಾಮ ಪಂಚಾಯತ್ , ಸುಜಯ್ ಪೂಜಾರಿ, ಜಿಲ್ಲಾಧ್ಯಕ್ಷರು ಕರವೇ ಉಡುಪಿ ಜಿಲ್ಲೆ : ಫ್ರಾಂಕಿ ಡಿಸೋಜಾ ಕೊಳಲಗಿರಿ, ಅಧ್ಯಕ್ಷರು ಕರವೇ ಬ್ರಹ್ಮಾವರ ತಾಲೂಕು, ಮಿಥುನ್ ಶೆಟ್ಟಿ ಹೆಬ್ರಿ, ಶಿವರಾಜ್ ಎಂ. ಲೆಕ್ಕ ಸಹಾಯಕರು ಉದ್ಯಾವರ ಗ್ರಾಮ ಪಂಚಾಯತ್,ಚಂದ್ರ ನಾಯ್ಕ,ಗ್ರಾಮಕರಣಿಕರು ಹಾವಂಜೆ ಗ್ರಾಮ ಪಂಚಾಯತ್ :  ಮೋಹಿನಿ ಸದಸ್ಯರು ಗ್ರಾಮ ಪಂಚಾಯತ್ ಹಾವಂಜೆ, ದಿವ್ಯಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾವಂಜೆ ಗ್ರಾಮ ಪಂಚಾಯತ್, ಪ್ರಶಾಂತ್ ಶೆಟ್ಟಿ ಅಧ್ಯಾಪಕರು ಹಾವಂಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Join Whatsapp