ಪತ್ರಕರ್ತರಿಗೆ ಭಾರತ, ಮೆಕ್ಸಿಕೊ ಸುರಕ್ಷಿತವಲ್ಲ | ಮಾಧ್ಯಮಗಳಿಗೆ ಅತಿ ಅಪಾಯಕಾರಿ ದೇಶಗಳ ಪಟ್ಟಿ ಬಿಡುಗಡೆ

Prasthutha|

ಜಿನೇವಾ : ಕಾರ್ಯ ನಿರತ ಪತ್ರಕರ್ತರ ವಿಚಾರದಲ್ಲಿ ಭಾರತ ಅತಿ ಅಪಾಯಕಾರಿ ರಾಷ್ಟ್ರ ಎಂದು ಪ್ರೆಸ್ ಎಂಬ್ಲೆಮ್ ಕ್ಯಾಂಪೇನ್ (ಪಿಇಸಿ) ವರದಿಯಲ್ಲಿ ತಿಳಿಸಲಾಗಿದೆ. ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ದೇಶಗಳ ಪೈಕಿ ಭಾರತ ನಂತರದ ಸ್ಥಾನದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಜಿನೇವಾದಲ್ಲಿ ಬಿಡುಗಡೆಯಾದ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಕೋವಿಡ್ 19 ಸಂಕಷ್ಟದ ಈ ಅವಧಿಯಲ್ಲೂ ಜಗತ್ತಿನಾದ್ಯಂತ 83 ಪತ್ರಕರ್ತರ ಹತ್ಯೆ ನಡೆದಿದೆ. 2019ಕ್ಕೆ ಹೋಲಿಸಿದರೆ, ಈ ವರ್ಷ ಪತ್ರಕರ್ತರ ಹತ್ಯೆ ಪ್ರಕರಣಗಳ ಪ್ರಮಾಣ ಶೇ.10ರಷ್ಟು ಏರಿಕೆಯಾಗಿದೆ.

- Advertisement -

ಕಳೆದ ಜನವರಿಯಿಂದ ಇಲ್ಲಿವರೆಗೆ ಜಗತ್ತಿನ 30 ರಾಷ್ಟ್ರಗಳಲ್ಲಿ 84 ಪತ್ರಕರ್ತರು ಹತರಾಗಿದ್ದಾರೆ. ಭಾರತದಲ್ಲಿ ಈ ವರ್ಷ 13 ಪತ್ರಕರ್ತರ ಹತ್ಯೆಯಾಗಿದೆ. ಅದರಲ್ಲೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹೆಚ್ಚಿನ ಪತ್ರಕರ್ತರ ಹತ್ಯೆಗಳಾಗಿವೆ. ಮೆಕ್ಸಿಕೊದಲ್ಲಿ 11 ಪತ್ರಕರ್ತರು ಸಾವಿಗೀಡಾಗಿದ್ದಾರೆ.   

- Advertisement -