ರೈತರ ಬೇಡಿಕೆ ಈಡೇರದಿದ್ದಲ್ಲಿ, ಮತ್ತೊಮ್ಮೆ ಬೃಹತ್ ಜನಾಂದೋಲನ ಮಾಡುತ್ತೇನೆ : ಅಣ್ಣಾ ಹಝಾರೆ ಎಚ್ಚರಿಕೆ

Prasthutha|

ಅಹಮದ್ ನಗರ : ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಕೇಂದ್ರ ಸರಕಾರದ ವಿರುದ್ಧ ವ್ಯಾಪಕ ಜನಾಂದೋಲನ ನಡೆಸುವುದಾಗಿ ಹಿರಿಯ ಹೋರಾಟಗಾರ ಅಣ್ಣಾ ಹಝಾರೆ ಎಚ್ಚರಿಕೆ ನೀಡಿದ್ದಾರೆ.

“ಲೋಕಪಾಲ್ ಆಂದೋನದ ವೇಳೆ ಆಗಿನ ಕಾಂಗ್ರೆಸ್ ಸರಕಾರ ನಡುಗಿತ್ತು. ರೈತರ ಪ್ರತಿಭಟನೆಯ ವಿಷಯವೂ ಅದೇ ಹಾದಿಯಲ್ಲಿದೆ. ಭಾರತ್ ಬಂದ್ ದಿನ ನಾನು ನನ್ನ ಗ್ರಾಮ ರಾಲೆಗಣ್ ಸಿದ್ದಿಯಲ್ಲಿ ಆಂದೋಲನ ಕೈಗೊಂಡಿದ್ದೆ. ರೈತರನ್ನು ಬೆಂಬಲಿಸಿ ನಾನು ಒಂದು ದಿನ ಉಪವಾಸ ಮಾಡಿದ್ದೇನೆ’’ ಎಂದು ಹಝಾರೆ ತಿಳಿಸಿದ್ದಾರೆ.

- Advertisement -

“ಸರಕಾರ ರೈತರ ಬೇಡಿಕೆಯನ್ನು ಈಡೇರಿಸದಿದ್ದರೆ, ನಾನು ಮತ್ತೊಮ್ಮೆ ಲೋಕಪಾಲ್ ಪ್ರತಿಭಟನೆ ಮಾದರಿಯಲ್ಲೇ ಜನಾಂದೋಲನ ನಡೆಸಲಿದ್ದೇನೆ’’ ಎಂದು ಅವರು ಹೇಳಿದ್ದಾರೆ.

- Advertisement -