ನ್ಯೂಯಾರ್ಕ್: 2021ರಲ್ಲಿ ಅತಿ ಹೆಚ್ಚು ಪತ್ರಕರ್ತರು ಹತ್ಯೆಗೀಡಾಗಿದ್ದು ಭಾರತದಲ್ಲಿ ಎಂದು ಅಧ್ಯಯನ ವರದಿ ತಿಳಿಸಿದೆ.
ಈ ವರ್ಷ ವಿಶ್ವದಲ್ಲೇ ಅತಿ ಹೆಚ್ಚು ಪತ್ರಕರ್ತರು ಹತ್ಯೆಯಾಗಿರುವ ದೇಶ ಭಾರತ ಎಂದು ಅಮೆರಿಕದ ‘ಕಮಿಟಿ ಟು ಪ್ರೊಟಕ್ಟ್ ಜರ್ನಲಿಸ್ಟ್’ ನಡೆಸಿದ ಅಧ್ಯಯನ ವರದಿಯಿಂದ ಬಹಿರಂಗವಾಗಿದೆ.
2021ರ ಡಿಸೆಂಬರ್ 1 ರವರೆಗೆ ಭಾರತದಲ್ಲಿ 4 ಪತ್ರಕರ್ತರು ಕೊಲ್ಲಲ್ಪಟ್ಟಿದ್ದು, ಕೆಲಸಕ್ಕೆ ಸಂಬಂಧಿತ ಪ್ರತೀಕಾರವೇ ಹತ್ಯೆಗೆ ಕಾರಣವಾಗಿದೆ. ಈ ವರ್ಷ ಜೈಲು ಪಾಲಾದ ಏಳು ಪತ್ರಕರ್ತರು ಇನ್ನೂ ಜೈಲಿನಲ್ಲಿದ್ದಾರೆ ಎಂದು ಅಧ್ಯಯನ ವರದಿ ತಿಳಿಸಿದೆ.
ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News