ಹೊಸ ರೂಪಾಂತರಿತ ಕೊರನ ವೈರಸ್ | ಡಿ.31ರ ವರೆಗೆ ಬ್ರಿಟನ್ ವಿಮಾನಗಳಿಗೆ ಭಾರತ ಪ್ರವೇಶಕ್ಕೆ ನಿರ್ಬಂಧ

Prasthutha|

ನವದೆಹಲಿ : ಇಂಗ್ಲೆಂಡ್ ನಲ್ಲಿ ಹೊಸ ರೂಪಾಂತರಿತ ಕೊರೊನ ವೈರಸ್  ರಾಕೆಟ್ ವೇಗದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಯುಕೆಯಿಂದ ಬರುವ ಎಲ್ಲಾ ವಿಮಾನಗಳಿಗೆ ಭಾರತ ನಿರ್ಬಂಧ ಹೇರಿದೆ. ನಾಳೆ ಮಧ್ಯರಾತ್ರಿಯಿಂದ ಡಿ.31ರ ವರೆಗೆ ಯುಕೆಯಿಂದ ಎಲ್ಲಾ ವಿಮಾನಗಳಿಗೆ ಭಾರತ ಪ್ರವೇಶಕ್ಕೆ ನಿರ್ಬಂಧವಿರಲಿದೆ ಎಂದು ವರದಿಯೊಂದು ತಿಳಿಸಿದೆ.

- Advertisement -

ಯುಕೆಯ ಪರಿಸ್ಥಿತಿ ಗಮನಿಸಿ, ಯುಕೆಯಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು ಡಿ.31ರ ವರೆಗೆ ರದ್ದುಗೊಳಿಸಲಾಗಿದೆ. ಅಲ್ಲದೆ ಭಾರತದಿಂದ ಯುಕೆಗೆ ಪ್ರಯಾಣಿಸುವ ವಿಮಾನಗಳೂ ತಾತ್ಕಾಲಿಕ ಸ್ಥಗಿತಗೊಳ್ಳಲಿವೆ ಎಂದು ಸರಕಾರ ತಿಳಿಸಿದೆ.  

ಯುಕೆಯಲ್ಲಿ ಹೊಸ ರೂಪಾಂತರಿತ ಕೊರೊನ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದೆ. ಹೀಗಾಗಿ ಹಲವು ದೇಶಗಳು ಯುಕೆಯಿಂದ ಬರುವ ವಿಮಾನಗಳಿಗೆ ನಿಷೇಧ ಹೇರಿವೆ.

- Advertisement -

ಇಂಗ್ಲೆಂಡ್ ನಲ್ಲಿ ಲಂಡನ್ ಮತ್ತು ಆಗ್ನೇಯ ಯುಕೆಯಲ್ಲಿ ಲಾಕ್ ಡೌನ್ ಹೇರಲಾಗಿದೆ. ಕ್ರಿಸ್ಮಸ್ ಹಬ್ಬದ ವೇಳೆ ಹೊರಗಿನ ಕಾರ್ಯಕ್ರಮಗಳಿಂದ ದೂರವಿರುವಂತೆ ನಿರ್ದೇಶಿಸಲಾಗಿದೆ. ಕೊರೊನ ವೈರಸ್ ಸೋಂಕಿತರ ಪ್ರದೇಶಗಳಿಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

Join Whatsapp