ಇಂಡಿಯಾ ಫ್ರೆಟರ್ನಿಟಿ ಫೋರಂ-ರಿಯಾದ್ ವತಿಯಿಂದ ಬೃಹತ್ ಕ್ರೀಡಾಕೂಟ; ಕರ್ನಾಟಕ ತಂಡ ಚಾಂಪಿಯನ್

Prasthutha|

ರಿಯಾದ್: ಇಂಡಿಯಾ ಫ್ರೆಟರ್ನಿಟಿ ಫೋರಂ ರಿಯಾದ್ ರೀಜನಲ್ ಸಮಿತಿ ವತಿಯಿಂದ ಬೃಹತ್ ಕ್ರೀಡಾಕೂಟ “Winter Sports meet 2021” ರಿಯಾದಿನ ಸುಲೈ ನಲ್ಲಿ ನಡೆಯಿತು.

- Advertisement -

    ಇಂಡಿಯಾ ಫ್ರೆಟರ್ನಿಟಿ ಫೋರಂ ರಿಯಾದ್ ರೀಜನಲ್ ಅಧ್ಯಕ್ಷ ಬಶೀರ್ ಇಂಗಾಪುಝ ಸಮವಸ್ತ್ರವನ್ನು ಆಯಾ ರಾಜ್ಯ ನಾಯಕರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಮಯದಲ್ಲಿ ಆರೋಗ್ಯದ ಮಹತ್ವವನ್ನು ಒತ್ತಿ ಹೇಳಿದರು. ವಿಶೇಷವಾಗಿ ತಮ್ಮ ಕುಟುಂಬ ಮತ್ತು ಮನೆಯಿಂದ ದೂರವಿರುವ ಅನಿವಾಸಿಗರು ಅರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಲು ಮನವಿ ಮಾಡಿದರು. ಯಾವುದೇ ರಾಷ್ಟ್ರ, ಸಮುದಾಯ ಅಥವಾ ನಿರ್ದಿಷ್ಟವಾದ  ವ್ಯಕ್ತಿಗೆ ಆರೋಗ್ಯವು ಅತ್ಯಂತ ಅಮೂಲ್ಯವಾದ ಆಸ್ತಿಯಾಗಿದೆ ಎಂದು ಹೇಳಿದರು.

- Advertisement -

    ಕ್ರೀಡಾಕೂಟದಲ್ಲಿ ಭಾಗವಹಿಸಿದ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ರಾಜ್ಯಗಳ ರಾಜ್ಯಾಧ್ಯಕ್ಷರು ತಮ್ಮ ರಾಜ್ಯದ ಕ್ರೀಡಾ ನಾಯಕರಿಗೆ ಕ್ರೀಡಾ ಧ್ವಜಗಳನ್ನು ಹಸ್ತಾಂತರಿಸುವುದರ ಮೂಲಕ ವರ್ಣರಂಜಿತ ಪಥ ಸಂಚಲನಕ್ಕೆ ಚಾಲನೆ ನೀಡಿದರು.

ಕಬಡ್ಡಿ, ಹಗ್ಗಜಗ್ಗಾಟ, ಕ್ರಿಕೆಟ್, ವಾಲಿಬಾಲ್, ಫುಟ್‌ಬಾಲ್, ಶಾಟ್‌ಪುಟ್, ಉರಿಯಡಿ, ರಿಲೇ ರೇಸ್ ಸೇರಿದಂತೆ ಹಲವಾರು ಆಕರ್ಷಕ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಯಿತು.

     ಫುಟ್ಬಾಲ್ ಫೈನಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡದ ವಿರುದ್ಧ ಕೇರಳ ಜಯಗಳಿಸಿದರೆ, ಸಾಕಷ್ಟು ಕುತೂಹಲ ಕೆರಳಿಸಿದ ವಾಲಿಬಾಲ್ ಫೈನಲ್ ಪಂದ್ಯಾಟದಲ್ಲಿ ತಮಿಳುನಾಡು ತಂಡವನ್ನು ಸೋಲಿಸುವ ಮೂಲಕ ಕರ್ನಾಟಕ ತಂಡವು ವಿಜಯಶಾಲಿಯಾಯಿತು.

   ಅದೇ ರೀತಿ ಕ್ರಿಕೆಟ್ ಫೈನಲ್ ಸೆಣಸಾಟದಲ್ಲಿ ಕೇರಳ ತಂಡವನ್ನೂ, ಹಗ್ಗಜಗ್ಗಾಟ ದಲ್ಲಿ ತಮಿಳುನಾಡು, ಕಬಡ್ಡಿಯಲ್ಲಿ ಉತ್ತರ ರಾಜ್ಯ ತಂಡವನ್ನು ಪರಾಜಯಗೊಳಿಸಿ ಅತ್ಯುತ್ತಮ ಪ್ರದರ್ಶನ ತೋರಿಸಿದ ಕರ್ನಾಟಕ ತಂಡವು “Winter Sports meet 2021” ನ ಚಾಂಪಿಯನ್ ಆಗಿ ಹೊರಹೊಮ್ಮಿತು.

      ಹಾಗೆಯೇ ಐವತ್ತು ವರ್ಷದ ಮೇಲ್ಪಟ್ಟರವರಿಗೆ, ಮಹಿಳೆಯರಿಗೆ ಮತ್ತು ಚಿಣ್ಣರಿಗಾಗಿ ವಿವಿಧ ಸ್ವಾರಸ್ಯಕರ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

      ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕ್ರೀಡಾಕೂಟದ ಸಂಯೋಜಕರಾದ ಜುನೇದ್ ಅನ್ಸಾರಿ, ಉದ್ಯಮಿಯಾದ ಜವಾಹರ್ ನಿಜಾಮ್, ಇಂಡಿಯಾ ಫ್ರೆಟರ್ನಿಟಿ ಫೋರಂ-ರಿಯಾದ್ ರೀಜನಲ್ ಸಮಿತಿಯ ಅಧ್ಯಕ್ಷರಾದ ಬಶೀರ್ ಇಂಗಾಪುಝ, ಉತ್ತರ ರಾಜ್ಯಗಳ ಅಧ್ಯಕ್ಷರಾದ ಮೊಹಮ್ಮದ್ ಜಾವಿದ್,    ತಮಿಳುನಾಡು ರಾಜ್ಯಾಧ್ಯಕ್ಷರಾದ ನಿಸಾರ್ ಅಹಮದ್, ಕರ್ನಾಟಕ ರಾಜ್ಯದ ಅಧ್ಯಕ್ಷ ತಾಜುದ್ದೀನ್, ಕೇರಳ ರಾಜ್ಯದ ಅಧ್ಯಕ್ಷರಾದ ಅನ್ಸಾರ್, ಇಂಡಿಯನ್ ಸೋಶಿಯಲ್ ಫೋರಂ ಸೆಂಟ್ರಲ್ ಕಮಿಟಿ ರಿಯಾದ್ ನ ಅಧ್ಯಕ್ಷ ಬಶೀರ್ ಕಾರಂತೂರು, ಇಂಡಿಯಾ ಫ್ರೆಟರ್ನಿಟಿ ಫೋರಂ-ರಿಯಾದ್ ರೀಜನಲ್ ಸಮಿತಿಯ ಸದಸ್ಯ ಹಾರಿಸ್ ಮಂಗಳೂರು ಮತ್ತು ಹಲವು ಗಣ್ಯರು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

   ಇಂಡಿಯಾ ಫ್ರೆಟರ್ನಿಟಿ ಫೋರಂ ರಿಯಾದ್ ನ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥರಾಗಿರುವ ಹಾರಿಸ್ ವಾವಡ್ ರವರು ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

Join Whatsapp