ಹಸಿವಿಗೆ ತತ್ತರಿಸುತ್ತಿರುವ ಭಾರತ | ಪಾಕ್, ನೇಪಾಳವನ್ನು ಹಿಂದಿಕ್ಕಿ 94 ರಿಂದ 101 ನೇ ಸ್ಥಾನಕ್ಕೆ ಕುಸಿದ ಭಾರತ

Prasthutha: October 15, 2021

ನವದೆಹಲಿ: 2020 – 2021 ಸಾಲಿನಲ್ಲಿ ಭಾರತ ಹಸಿವಿನ ಪ್ರಮಾಣದಲ್ಲಿ 94 ನೇ ಸ್ಥಾನದಿಂದ 101 ಕ್ಕೆ ಕುಸಿದಿದೆ ಎಂದು 116 ದೇಶದಲ್ಲಿ ಜಾಗತಿಕ ಹಸಿವು ಸೂಚ್ಯಂಕ ನಡೆಸಿದ ಅಧ್ಯಯನ ತಿಳಿಸಿದೆ.

ಮಾತ್ರವಲ್ಲ ಹಸಿವಿನ ಪ್ರಮಾಣದಲ್ಲಿ ಭಾರತ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳವನ್ನು ಹಿಂದಿಕ್ಕಿದೆ ಎಂದು ಜಿ.ಎಚ್.ಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಚೈನಾ, ಬ್ರೆಝಿಲ್ ಮತ್ತು ಕುವೈಟ್ ಸೇರಿದಂತೆ ಸುಮಾರು 18 ರಾಷ್ಟ್ರಗಳು ಜಿ.ಎಚ್.ಐ ಅಂಕಿಅಂಶಗಳಲ್ಲಿ ಐದಕ್ಕಿಂತ ಕಡಿಮೆ ಶ್ರೇಣಿಗಳೊಂದಿಗೆ ಅಗ್ರ ಸ್ಥಾನಗಳನ್ನು ಹಂಚಿಕೊಂಡಿವೆ. ಪ್ರಸಕ್ತ ಈ ವರದಿಯನ್ನು ಹಸಿವು ಮತ್ತು ಅಪೌಷ್ಟಿಕತೆಯನ್ನು ಪತ್ತೆಹಚ್ಚುವ ಜಾಗತಿಕ ಸಂಸ್ಥೆ ತನ್ನ ವೆಬ್ ಸೈಟ್ ನಲ್ಲಿ ಬಿಡುಗಡೆಗೊಳಿಸಿದೆ.

ಐರಿಶ್ ಒಕ್ಕೂಟದ ನೆರವಿನೊಂದಿಗೆ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಜರ್ಮನ್ ಸಂಸ್ಥೆ ವೆಲ್ಟ್ ಹಂಗರ್ ಹಿಲ್ಫೆ ಜಂಟಿಯಾಗಿ ತಯಾರಿಸಿದ ವರದಿಯಲ್ಲಿ ಭಾರತದ ಪ್ರಸಕ್ತ ಬೆಳವಣಿಗೆ ಆತಂಕಕಾರಿ ಎಂದು ಬಣ್ಣಿಸಿದೆ.

ಪ್ರಸಕ್ತ ಭಾರತದಲ್ಲಿ ತಲೆದೋರಿರುವ ಈ ಸಮಸ್ಯೆಯಿಂದಾಗಿ ಜನರು ಅಪೌಷ್ಟಿಕತೆ, ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತ, ಮಕ್ಕಳ ಆಹಾರದ ವ್ಯರ್ಥ ಪ್ರಮಾಣ, ಹಸಿವಿನಿಂದ ಮಕ್ಕಳ ಮರಣದ ಪ್ರಮಾಣ ಭವಿಷ್ಯದಲ್ಲಿ ಪ್ರಕ್ಷುಬ್ದತೆ ಸೃಷ್ಟಿಸಲಿದೆ ಎಂದು GHI ಆತಂಕ ವ್ಯಕ್ತಪಡಿಸಿದೆ.

ಕೋವಿಡ್ 19 ನಿಂದಾಗಿ ಭಾರತದಲ್ಲಿ ಸಾಂಕ್ರಾಮಿಕ ಸಂಬಂಧಿತ ನಿರ್ಬಂಧಗಳಿಂದಾಗಿ ಜನರು ತೀವ್ರ ತೊಂದರೆಗೀಡಾಗಿದ್ದಾರೆ. ವಿಶ್ವದಾದ್ಯಂತ ಅತಿಹೆಚ್ಚು ಮಕ್ಕಳ ವ್ಯರ್ಥ ಪ್ರಮಾಣ ಹೊಂದಿರುವ ದೇಶ ಎಂದು ವರದಿ ಮಾಡಿದೆ.

ನೆರೆಯ ರಾಷ್ಟ್ರಗಳಾದ ನೇಪಾಳ (76), ಬಾಂಗ್ಲಾದೇಶ (76) ಮ್ಯಾನ್ಮಾರ್ (71), ಪಾಕಿಸ್ತಾನ (92) ಸ್ಥಾನಗಳನ್ನು ಅಲಂಕರಿಸುವ ಮೂಲಕ ಹಸಿವಿನ ವಿಷಯದಲ್ಲಿ ಆತಂಕದಲ್ಲಿದೆ. ಆದರೆ ಭಾರತಕ್ಕಿಂತ ಉತ್ತಮ ದರ್ಜೆಯಲ್ಲಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!