ಭಾರತದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ತರಬೇಕು: ಮೋಹನ್ ಭಾಗವತ್

Prasthutha|

ಮುಂಬೈ: ದೇಶದಲ್ಲಿ ಜನಸಂಖ್ಯಾ ಸ್ಫೋಟ ನಿಯಂತ್ರಣಕ್ಕೆ ಸರ್ಕಾರ ಕಾನೂನು ತರಬೇಕು. ಇದನ್ನು ಪ್ರತಿಯೊಬ್ಬರೂ ಸ್ವೀಕರಿಸುತ್ತಾರೆ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- Advertisement -


ಇಂದು ನಾಗಪುರದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಜಯ ದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಂಖ್ಯೆ ವೃದ್ಧಿಯಿಂದ ಸಾಕಷ್ಟು ಸಮಸ್ಯೆಗಳು ಭವಿಷ್ಯದಲ್ಲಿ ಎದುರಾಗಲಿವೆ. ಹಾಗಾಗಿ ಸಮಯೋಚಿತವಾಗಿ ಜನಸಂಖ್ಯೆ ನಿಯಂತ್ರಣದ ಸವಾಲು ತೆಗೆದುಕೊಳ್ಳಬೇಕಿದೆ ಎಂದರು.


ಈ ವಿಚಾರಕ್ಕೆ ಸಂಬಂಧಿಸಿ 2015ರಲ್ಲಿ ರಾಂಚಿಯಲ್ಲಿ ನಡೆದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದಲ್ಲಿ ತೆಗೆದುಕೊಂಡ ದೃಢಸಂಕಲ್ಪವನ್ನು ಅವರು ಪುನರುಚ್ಚರಿಸಿದರು.
ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ವವ್ಯಾಪಿ ಮತ್ತು ಪರಿಣಾಮಕಾರಿ ಕಾನೂನುಗಳನ್ನು ಅನುಷ್ಠಾನಕ್ಕೆ ತರಬೇಕು. ಸರ್ವರಿಗೂ ಅರಿವು ಮೂಡಿಸಬೇಕು. ತಾರತಮ್ಯವಿಲ್ಲದೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಭಾಗವತ್ ಹೇಳಿದರು.

- Advertisement -


ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಂದರ್ಭ ಹಿಂಸಾಕೃತ್ಯಗಳು ಸ್ಫೋಟಗೊಳ್ಳಲು ಮತ್ತು ಅಲ್ಲಿನ ಹಿಂದುಗಳಲ್ಲಿ ದಯನೀಯ ಪರಿಸ್ಥಿತಿ ನಿರ್ಮಾಣಗೊಳ್ಳಲು ಅಸಮತೋಲನದ ಜನಸಂಖ್ಯಾವೃದ್ಧಿ ಮತ್ತು ಅಲ್ಲಿನ ಸರ್ಕಾರದ ನಿರ್ಲಕ್ಷ್ಯ ಧೋರಣೆಗಳು ಕಾರಣ ಎಂದು ಭಾಗವತ್ ದೂರಿದ್ದಾರೆ.

Join Whatsapp