ಭಾರತೀಯ ವಿಜ್ಞಾನಿಗೆ ‘ಆರ್ಡರ್ ಆಫ್ ಮೆರಿಟ್’ ಗೌರವ

Prasthutha|

ಲಂಡನ್ : ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಗಣನೀಯ ಸೇವೆಯನ್ನು ಪರಿಗಣಿಸಿ ಭಾರತೀಯ ವಿಜ್ಞಾನಿ, ನೋಬೆಲ್ ಪ್ರಶಸ್ತಿ ಪುರಸ್ಕೃತ ವೆಂಕಿ ರಾಮಕೃಷ್ಣನ್ ಅವರಿಗೆ ‘ಆರ್ಡರ್ ಆಫ್ ಮೆರಿಟ್’ ಗೌರವವನ್ನು ನೀಡಲಾಗಿದೆ .

- Advertisement -

ಸೇನಾಪಡೆ , ವಿಜ್ಞಾನ , ಕಲೆ , ಸಾಹಿತ್ಯ ಅಥವಾ ಸಾಹಿತ್ಯದ ಪ್ರೋತ್ಸಾಹಕ್ಕೆ ಬೆಂಬಲ ನೀಡುವವರಿಗೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿಈ ಗೌರವ ಪ್ರದಾನ ಮಾಡಲಾಗುತ್ತದೆ . ತಮಿಳುನಾಡಿನ ಚಿದಂಬರಂನಲ್ಲಿ ಜನಿಸಿದ್ದ ಡಾ . ವೆಂಕಿ ರಾಮಕೃಷ್ಣನ್ ಅವರು ಅಮೆರಿಕದಲ್ಲಿ ಜೀವಶಾಸ್ತ್ರದ ಅಧ್ಯಯನ ಮಾಡಿದ್ದರು . 2009 ರಲ್ಲಿ ಅವರಿಗೆ ರಸಾಯನಶಾಸ್ತ್ರದಲ್ಲಿ ನಡೆಸಿದ್ದ ಸಂಶೋಧನೆಗಾಗಿ ನೊಬೆಲ್ ಗೌರವ ಲಭಿಸಿತ್ತು

ಬ್ರಿಟನ್ ರಾಜಮನೆತನದ ರಾಣಿ ಎರಡನೇ ಎಲಿಜಬೆತ್ ಅವರು ಸೆಪ್ಟೆಂಬರ್‌ನಲ್ಲಿ ನಿಧನರಾಗುವುದಕ್ಕಿಂತ ಮೊದಲೇ ಈ ಬಗ್ಗೆ ಆದೇಶ ಸಿದ್ಧಪಡಿಸಿ ಇರಿಸಿದ್ದರು . ಹಾಲಿ ದೊರೆ ಮೂರನೇ ಚಾರ್ಲ್ಸ್ ಅವರು ಈಗ ಬಿಡುಗಡೆಗೊಳಿಸಿದ್ದಾರೆ .

- Advertisement -

Join Whatsapp