ಕೆಸಿ ರೋಡ್ ನಲ್ಲಿ ಸಿಟಿಝನ್ಸ್ ಕ್ಲಬ್ ನಿಂದ ಇಂಡಿಪೆಂಡೆಂಟ್ಸ್ ಟ್ರೋಫಿ

Prasthutha|

ತಲಪಾಡಿ: ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ ಸಿಟಿಝನ್ಸ್ ಕ್ಲಬ್ ವತಿಯಿಂದ ಕೆಸಿ ನಗರ ಸಿಟಿಝನ್ಸ್ ಮೈದಾನದಲ್ಲಿ 3 ವಿಭಾಗಗಳಲ್ಲಿ ಇಂಡಿಪೆಂಡೆಂಟ್ಸ್ ಕಪ್ ಫುಟ್ಬಾಲ್ ಪಂದ್ಯಾವಳಿಯಳಿಯನ್ನು ಆಯೋಜಿಸಲಾಗಿತ್ತು. ಮುಕ್ತ ಪಂದ್ಯಾವಳಿಯ ಫೈನಲ್ ಪಂದ್ಯಾವಳಿಯಲ್ಲಿ ಸ್ಪಾನಿಷ್ ಮಂಜೇಶ್ವರ ಪ್ರಥಮ ಸ್ಥಾನ ಟ್ರೋಫಿ ಮತ್ತು ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ಕಸಬಾ ಬೆಂಗ್ರೆ ತಂಡ ದ್ವಿತೀಯ ಸ್ಥಾನ ಪಡೆದಿದೆ.

- Advertisement -

22 ವರ್ಷದೊಳಗಿನವರ ಫೈನಲ್ ಪಂದ್ಯಾವಳಿಯಲ್ಲಿ ಕಸಬಾ ಬೆಂಗ್ರೆ ತಂಡ ಪ್ರಥಮ ಸ್ಥಾನ ಪಡೆದು ಟ್ರೋಫಿ ಮತ್ತು ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ಸಿಟಿಝನ್ಸ್ ಕೆಸಿ ನಗರ ತಂಡ ದ್ವಿತೀಯ ಸ್ಥಾನ ಪಡೆಯಿತು. 16 ವರ್ಷದೊಳಗಿನವರ ಫೈನಲ್ ಪಂದ್ಯಾವಳಿಯಲ್ಲಿ ಮಂಜೇಶ್ವರ ತಂಡ ಪ್ರಥಮ ಸ್ಥಾನ ಪಡೆದು ಟ್ರೋಫಿ ಮತ್ತು ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ಸಿಟಿಝನ್ಸ್ ಕೆಸಿ ನಗರ ದ್ವಿತೀಯ ಸ್ಥಾನ ಪಡೆಯಿತು. ಇದೇ ಸಂದರ್ಭದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಶಾಲಾ ಫುಟ್ಬಾಲ್ ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದ ತಲಪಾಡಿ ಫಲಾಹ್ ಶಾಲಾ ತಂಡವನ್ನು ಅಭಿನಂದಿಸಲಾಯಿತು.

ಬಹುಮಾನ ವಿತರಣಾ ಸಮಾರಂಭದಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್, ಸಾಮಾಜಿಕ ಕಾರ್ಯಕರ್ತ ಆಸಿಫ್ ಕೆಸಿ ನಗರ, ಗ್ರಾಮ ಪಂಚಾಯತ್ ಸದಸ್ಯರಾದ ಝಹೀರ್, ಟಿ ಇಸ್ಮಾಯಿಲ್, ಮುಖಂಡರಾದ ಮೊಯ್ದಿನ್ ಬಾವ, ಆರಿಫ್ ಸೆವೆನ್ ಡೇಸ್, ಅಶ್ರಫ್, ಅಬ್ಬಾಸ್, ರಶೀದ್ ಇಂಜಿನಿಯರ್, ತಂಶೀರ್ ಅಹಮದ್, ಮೊಯ್ದಿನ್ ಅಜ್ಜಿನಡ್ಕ ಮತ್ತಿತರರು ಉಪಸ್ಥಿತರಿದ್ದರು.

- Advertisement -



Join Whatsapp