ಸ್ವಾತಂತ್ರ್ಯೋತ್ಸವ ವಂಡರ್‌ಲಾ ದಿಂದ ಯೋಧರಿಗೆ ವಿಶೇಷ ಗೌರವ ಹಾಗೂ ಕೊಡುಗೆ

Prasthutha|

ಬೆಂಗಳೂರು: 75ನೇ ಸ್ವಾತಂತ್ರೋತ್ಸವ ಅಮೃತಮಹೋತ್ಸವದ ಅಂಗವಾಗಿ ವಂಡರ್‌ಲಾ ಪಾರ್ಕ್‌ ವತಿಯಿಂದ 75 ಆಯ್ದ ವೀರ ಯೋಧರು ಹಾಗೂ ಅವರ ಕುಟುಂಬಸ್ಥರಿಗೆ ಉಚಿತ ಪ್ರವೇಶ ನೀಡುವ ಮೂಲಕ ಗೌರವ ಸಮಪರ್ಕಿಸುತ್ತಿದೆ. ಆಗಸ್ಟ್‌ 15 ರಿಂದ 17 ರವರೆಗೆ ಈ ಯೋಧರು ತಮ್ಮ ಕುಟುಂಬಸ್ಥರೊಂದಿಗೆ ಭೇಟಿ ನೀಡಬಹುದು.

- Advertisement -

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದಿದ್ದು, ಇದರ ಸಂಭ್ರಮಾಚರಣೆಯ ಪ್ರಯುಕ್ತ, ಈ ದೇಶಕ್ಕಾಗಿ ದುಡಿಯುತ್ತಿರುವ ಯೋಧರಿಗೋಸ್ಕರ ಈ ಗೌರವ ಸಮರ್ಪಿಸಲಾಗುತ್ತಿದೆ. 75 ಯೋಧರು ತಮ್ಮ ಕುಟುಂಬದಿಂದ ಒಟ್ಟು 3 ಸದಸ್ಯರನ್ನು ಪಾರ್ಕ್‌ಗೆ ಕರೆತರಬಹುದು. ವೀರ ಯೋಧರಿಗೆ ಉಚಿತ ಪ್ರವೇಶದ ಜೊತೆಗೆ ಉಚಿತವಾಗಿ ಊಟೋಪಚಾರ ಹಾಗೂ ಎಲ್ಲಾ ರೈಡ್‌ಗಳು ಉಚಿತವಾಗಿರಲಿದೆ. ಇದಷ್ಟೇ ಅಲ್ಲದೆ, ಈ ದೇಶಕ್ಕಾಗಿ ದುಡಿಯುತ್ತಿರುವ ಯೋಧರು, ಮಾಜಿ ಯೋಧರಿಗೂ ಸಹ ವಿಶೇಷ ಆಫರ್‌ ನೀಡಿದ್ದು, ಪ್ರತಿಯೊಬ್ಬ ಯೋಧರಿಗೆ ಶೇ.25 ರಷ್ಟು ರಿಯಾಯಿತಿ ನೀಡಲಾಗಿದೆ. ಈ ಆಫರ್‌ ಆಗಸ್ಟ್‌ 31 ರವರೆಗೆ ಇರಲಿದೆ. ಯೋಧರು ತಮ್ಮೊಂದಿಗೆ 3 ಸದಸ್ಯರನ್ನು ಈ ಆಫರ್ ನೊಂದಿಗೆ ಕರೆದೊಯ್ಯಬಹುದು.
ಹೆಚ್ಚಿನ ಮಾಹಿತಿಗಾಗಿ https://www.wonderla.com/ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ 080 37230333/ 080 35073966 ಸಂಖ್ಯೆಗೆ ಕರೆ ಮಾಡಬಹುದು.



Join Whatsapp