ದಮ್ಮಾಮ್ ; ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ ದಮ್ಮಾಮ್ ನಲ್ಲಿ ಭಾರತದ 75ನೇಯ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರು ಶಂಸುದ್ದೀನ್ ಪಡುಬಿದ್ರೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಲಿ ಮೂಳೂರು, ಖಾದರ್ ಕೃಷ್ಣಾಪುರ, ಇಮ್ರಾನ್ ಕಾಟಿಪಳ್ಳ ಹಾಗೂ ಇರ್ಷಾದ್ ಜೋಕಟ್ಟೆ ಮಾತನಾಡಿ, ಭಾರತದ ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲಾ ಜಾತ್ಯತೀತ ಮನಸುಗಳು ಒಂದುಗೂಡಿ ಫ್ಯಾಶಿಸಂನ ವಿರುದ್ಧವಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಮುಸ್ತಫಾ ವಾಮಂಜೂರು ಕಾರ್ಯಕ್ರಮ ನಿರ್ವಹಿಸಿದರೆ, ಅಶ್ರಫ್ ಸುರತ್ಕಲ್ ವಂದಿಸಿದರು.