ಏಷ್ಯಾ ಕಪ್‌| ಪಾಕಿಸ್ತಾನ ವಿರುದ್ಧದ ಪಂದ್ಯ, ಟೀಮ್‌ ಇಂಡಿಯಾದಲ್ಲಿ ಎರಡು ಬದಲಾವಣೆ

Prasthutha|

ದುಬೈ: ಏಷ್ಯಾ ಕಪ್‌ ಟೂರ್ನಿಯ ಸೂಪರ್‌ 4 ಹಂತದ  ಹೈ ವೋಲ್ಟೇಜ್‌ ಕದನದಲ್ಲಿ ಭಾರತ– ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ, ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ.

- Advertisement -

ಮಹತ್ವದ ಪಂದ್ಯದಲ್ಲಿ ಟೀಮ್‌ ಇಂಡಿಯಾ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಅನುಭವಿ ದಿನೇಶ್‌ ಕಾರ್ತಿಕ್‌ ಅವರನ್ನು ಕೈಬಿಡಲಾಗಿದೆ. ಕಾರ್ತಿಕ್‌ ಬದಲು ದೀಪಕ್‌ ಹೂಡಾ ತಂಡವನ್ನು ಸೇರಿಕೊಂಡಿದ್ದಾರೆ. ಮತ್ತೊಂದೆಡೆ ಜ್ವರದಿಂದ ಬಳಲುತ್ತಿರುವ ಆವೇಶ್‌ ಖಾನ್‌ ಇನ್ನೂ ಚೇತರಿಸಿಕೊಳ್ಳದ ಕಾರಣ  ಸ್ಪಿನ್ನರ್‌ ರವಿ ಬಿಷ್ಣೋಯ್‌ ಸ್ಥಾನ ಪಡೆದಿದ್ದಾರೆ.

ಗಾಯಾಳು ಶಹನವಾಝ್‌ ದಹಾನಿ ಸ್ಥಾನಕ್ಕೆ ಹಸ್ನೈನ್‌

- Advertisement -

ಗಾಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡದ ವೇಗಿ ಶಹನವಾಝ್‌ ದಹಾನಿ, ಭಾರತ ವಿರುದ್ಧದ ಪಂದ್ಯದಿಂದ ಹೊರ ನಡೆದಿದ್ದಾರೆ. ಇವರ ಸ್ಥಾನಕ್ಕೆ ಮತ್ತೋರ್ವ ವೇಗಿಮ ಮುಹಮ್ಮದ್‌ ಹಸ್ನೈನ್‌ ಅವರನ್ನು ಕರೆತರಲಾಗಿದೆ. ಶುಕ್ರವಾರ (ಸೆಪ್ಟೆಂಬರ್‍‌ 2) ನಡೆದಿದ್ದ ಹಾಂಕಾಂಗ್‌ ವಿರುದ್ಧದ ಪಂದ್ಯದಲ್ಲಿ ಶಹನವಾಝ್‌ ದಹಾನಿ ಆಡಿದ್ದರು. ಆದರೆ, ಅವರು ಬೌಲಿಂಗ್‌ ವೇಳೆ ಗಾಯಕ್ಕೆ ತುತ್ತಾಗಿದ್ದಾರೆ.

ಉಭಯ ತಂಡಗಳ ಆಡುವ ಹನ್ನೊಂದರ ಬಳಗ ಹೀಗಿದೆ

ಭಾರತ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್‌ ಕೀಪರ್‌), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಯಜುವೇಂದ್ರ ಚಾಹಲ್, ಅರ್ಷದೀಪ್ ಸಿಂಗ್

ಪಾಕಿಸ್ತಾನ: ಮುಹಮ್ಮದ್ ರಿಝ್ವಾನ್ (ವಿಕೆಟ್‌ ಕೀಪರ್‌), ಬಾಬರ್ ಅಜಮ್(ನಾಯಕ), ಫಖರ್ ಝಮಾನ್, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಆಸಿಫ್ ಅಲಿ, ಮುಹಮ್ಮದ್ ನವಾಝ್, ಹ್ಯಾರಿಸ್ ರೌಫ್, ಮುಹಮ್ಮದ್ ಹಸ್ನೈನ್, ನಸೀಮ್ ಶಾ



Join Whatsapp