ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಶಾಸಕ ಅರವಿಂದ ಲಿಂಬಾವಳಿ ರಾಜೀನಾಮೆ ನೀಡಲಿ: WIM

Prasthutha|

ಬೆಂಗಳೂರು: ಮಳೆ ಅನಾಹುತ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ರಾಜ ಕಾಲುವೆ  ಒತ್ತುವರಿ ಸಂಬಂಧಿಸಿದ ದೂರು ನೀಡಲು ಆಗಮಿಸಿದ ಮಹಿಳೆಯೋರ್ವ ಳೊಂದಿಗೆ ಶಾಸಕ ಅರವಿಂದ ನಿಂಬಾವಳಿ ದರ್ಪದಿಂದ ವರ್ತಿಸಿದ ಘಟನೆಯನ್ನು ವಿಮೆನ್ ಇಂಡಿಯ ಮೂವ್ಮೆಂಟ್ ಖಂಡಿಸಿದೆ.

- Advertisement -

 ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿಯಿತ್ತು ಸತ್ಯಾ ಸತ್ಯತೆಯನ್ನು ಅರಿತು ತನಿಖೆ ನಡೆಸಿ ಪರಿಹಾರ ಕಂಡುಕೊಳ್ಳಲು ಶಾಸಕರಿಗೆ ಮನಸ್ಸಿದ್ದಂತೆ ಕಂಡು ಬರುತ್ತಿಲ್ಲ. ಬದಲಾಗಿ ಕಾಟಾಚಾರಕ್ಕೆ ಪ್ರದೇಶಕ್ಕೆ ಭೇಟಿಯಿತ್ತು ಮಾಧ್ಯಮದ ಪ್ರಚಾರ ಪಡೆದು ಪ್ರವಾಹದ ಲಾಭ ಪಡೆಯಲು ಬಯಸಿದ್ದರು. ಆದ್ದರಿಂದಲೇ ಅವರಿಗೆ ಸಂತ್ರಸ್ತರ ಅಹವಾಲನ್ನು ಆಲಿಸಲು ಸಾಧ್ಯವಾಗಲಿಲ್ಲ.

 ಬೇಟಿ ಬಚಾವೋ ಬೇಟಿ ಪಡಾವೋ ಎಂಬುದು ಒಂದು ಆಕರ್ಷಕ ಘೋಷಣೆಯಾಗಿ ಬಿಜೆಪಿ ಬಳಸಿದೆಯೇ ಹೊರತು ಪ್ರಾಯೋಗಿಕವಾಗಿ ಸ್ವೀಕರಿಸಿಲ್ಲ ಎಂಬುದು ಹಲವಾರು ಬಾರಿ ಸಾಬೀತಾಗಿದೆ. ಅದಕ್ಕೆ ಇದು ಇನ್ನೊಂದು ಸೇರ್ಪಡೆಯಾಗಿದೆ. ಇದೆಲ್ಲದರ ಪರಿಣಾಮವಾಗಿ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶವಾಗಿ ಗುರುತಿಸಲ್ಪಟ್ಟಿದೆ . ಜೊತೆಗೆ ಎನ್ ಸಿ ಆರ್ ಬಿ ಯ ಹೊಸ ವರದಿ ಪ್ರಕಾರ ಬೆಂಗಳೂರು ಕೂಡ ಅಸುರಕ್ಷಿತ ನಗರವಾಗಿ ಗುರುತಿಸಲ್ಪಟ್ಟಿದೆ. ಕ್ಷಮೆ ಕೇಳುವ ಬದಲು ನಾನೇನು ಅವಳನ್ನು ರೇಪ್ ಮಾಡಿದ್ದೀನಾ?  ಎನ್ನುತ್ತಾ ತನ್ನ ನಿಜ ಸಂಸ್ಕೃತಿಯನ್ನು ಬಯಲು ಮಾಡಿದ್ದಾರೆ. ಮಹಿಳೆ ಎರಡನೇ ದರ್ಜೆಯ ಪ್ರಜೆಯಾಗಿ ಇರಬೇಕೆನ್ನುವ  ಬಿಜೆಪಿಯ ಮನು ಸಂಸ್ಕೃತಿಯು ಇವರನ್ನು ಈ ಹಂತಕ್ಕೆ ತಲುಪಿಸಿದೆ. ಅದೂ ಅಲ್ಲದೆ ರಾಜ್ಯ ರಾಷ್ಟ್ರ ರಾಜಕಾರಣದಲ್ಲಿ ಮಾಧ್ಯಮ ಪ್ರಚಾರ ಗಿಟ್ಟಿಸಲು ಸ್ಥಳೀಯ ಶಾಸಕರು ಗಳು ಇಂತಹ ಬೇಜವಾಬ್ದಾರಿ ಹೇಳಿಕೆಗಳು ನೀಡುತ್ತಿರುವುದು ಇಂದಿನ ದಿನಗಳಲ್ಲಿ ಒಂದು ಚಾಳಿಯಾಗಿ ಮಾರ್ಪಟ್ಟಿದೆ.

- Advertisement -

 ಶಾಸಕರಾಗಿ ಮುಂದುವರಿಯಲು ಎಳ್ಳಷ್ಟೂ ಅರ್ಹತೆ ಇಲ್ಲದ ಅರವಿಂದ ಲಿಂಬಾವಳಿ ತಕ್ಷಣ ರಾಜಿನಾಮೆ ನೀಡಬೇಕೆಂದು ಮತ್ತು ಮಹಿಳೆಯ ಮೇಲಿನ ಸುಳ್ಳು ಪ್ರಕರಣವನ್ನು ಹಿಂಪಡೆಯಬೇಕೆಂದು ವಿಮೆನ್ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಧ್ಯಕ್ಷೆ ಫಾತಿಮಾ ನಸೀಮಾ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp