ಬೆಂಗಳೂರು: ಬೆಳದಿಂಗಳ ಆಶ್ರಯ ಟ್ರಸ್ಟ್ ನ ವತಿಯಿಂದ ಇಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಹಾಗೂ ಕಣ್ಣಿನ ಚಿಕಿತ್ಸೆ ನೆರವೇರಿಸಲಾಯಿತು
ಇದೆ ಸಂದರ್ಭದಲ್ಲಿ ಗಣ್ಯರಿಂದ ನಂದಿ ವಿಗ್ರಹಕ್ಕೆ ಪುಷ್ಪ ನಮನ ಸಲ್ಲಿಸುವ ಮುಖಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಕಾರ್ಯಕ್ರಮದಲ್ಲಿ ಬೆಳದಿಂಗಳ ಆಶ್ರಯ ಟ್ರಸ್ಟ್ ಗೆ ದೇಣಿಗೆ ಮತ್ತು ದಿನೋಪಯೋಗಿ ಸಾಮಗ್ರಿಗಳನ್ನು ನೀಡಿದ ದಾನಿಗಳಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ಮಾಪಕ ಉಮಾಪತಿ ಗೌಡ, ಮತ್ತು ಟ್ರಸ್ಟಿನ ಗೌರವಾಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಸಮಾಜ ಸೇವಕರಾದ ಪವರ್ ವೆಂಕಟೇಶ್, ಅಧ್ಯಕ್ಷ ವಿಜಯ್ ಸೂರ್ಯ, ಸೇರಿದಂತೆ ಅನೇಕ ಗಣ್ಯರು ಪದಾಧಿಕಾರಿಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಅದ್ಧೂರಿಯಾಗಿ ನಡೆದ ಬೆಳದಿಂಗಳ ಆಶ್ರಯ ಟ್ರಸ್ಟ್ ಉದ್ಘಾಟನಾ ಸಮಾರಂಭ
Prasthutha|