ದೆಹಲಿ : ಹಿಂದೂ ಸೇನಾ ಮುಖಂಡನೊಬ್ಬ ದೆಹಲಿಯ ಅಕ್ಬರ್ ರೋಡ್ ನಲ್ಲಿರುವ ಅಕ್ಬರ್ ರೋಡ್ ಎಂಬ ನಾಮಫಲಕಕ್ಕೆ ಹೇಮು ವಿಕ್ರಮಾದಿತ್ಯ ಎಂಬ ರಾಜನ ಭಾವಚಿತ್ರ ಮತ್ತು ಆತನ ಹೆಸರಿರುವ ಸ್ಟಿಕ್ಕರನ್ನು ಅಂಟಿಸಿ ಸದ್ಯ ವಿವಾದಕ್ಕೀಡಾಗಿದ್ದಾನೆ.
ಅದರ ಜೊತೆಗೆ ಹಿಂದಿಯಲ್ಲಿ ಬರೆದ ತಿರುಚಿದ ಇತಿಹಾಸದ ಸ್ಟಿಕ್ಕರನ್ನೂ ಅಂಟಿಸಿದ್ದಾನೆ. ಇನ್ನು ಈ ವಿಚಾರ ತಿಳಿದ ಎಬಿಪಿ ನ್ಯೂಸ್ ಚಾನೆಲ್ ವರದಿಗಾರ್ತಿ ನಿವೇದಿತಾ ಶಾಂಡಿಲ್ಯ, ಪೋಸ್ಟರ್ ಅಂಟಿಸಿದ ಹಿಂದೂ ಸೇನೆಯ ಮುಖಂಡನನ್ನು ಮಾತಿಗಿಳಿಸಿದಾಗ ತಪ್ಪು ತಪ್ಪು ಮಾಹಿತಿಯನ್ನು ನೀಡುತ್ತಾ ಇತಿಹಾಸದ ಕುರಿತು ವರದಿಗಾರ್ತಿ ಇನ್ನಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಉತ್ತರ ಗೊತ್ತಿಲ್ಲದೆ ತಡವರಿಸಿದ್ದಾನೆ. ಇದೇ ಹೊತ್ತಿಗೆ ಪೊಲೀಸರು ಆಗಮಿಸುವುದನ್ನು ಗಮನಿಸಿದ ಹಿಂದೂ ಸೇನಾ ಮುಖಂಡ ಮಾತಿನ ಮಧ್ಯೆಯೇ ಕಾಲ್ಕಿತ್ತಿದ್ದಾನೆ.
ಇದೀಗ ಸಾಮಾಜಿಕ ತಾಣಗಳಲ್ಲಿ ಹಿಂದೂ ಸೇನಾ ಮುಖಂಡನ ಓಟ ಸಕತ್ ಟ್ರೋಲ್ ಗಳಿಗೊಳಗಾಗಿದೆ