ನವೆಂಬರ್ ನಲ್ಲಿ ಹತ್ತು ದಿನ ಬ್ಯಾಂಕ್ ರಜೆ, ಇಲ್ಲಿದೆ  ಸಂಪೂರ್ಣ ಮಾಹಿತಿ

Prasthutha|

ನವದೆಹಲಿ: ಈ ವರ್ಷದ ನವೆಂಬರ್ ನಲ್ಲಿ ಹತ್ತು ದಿನಗಳ ಕಾಲ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

- Advertisement -

ಅಕ್ಟೋಬರ್ ನಲ್ಲಿ, ನವರಾತ್ರಿ, ದುರ್ಗಾ ಪೂಜೆ, ಗಾಂಧಿ ಜಯಂತಿ, ದಸರಾ ಮತ್ತು ದೀಪಾವಳಿ ಸೇರಿದಂತೆ 21 ದಿನಗಳ ಕಾಲ ಬ್ಯಾಂಕುಗಳನ್ನು ಮುಚ್ಚಲಾಗಿತ್ತು.

ನವೆಂಬರ್ ತಿಂಗಳಲ್ಲಿರುವ  ಹತ್ತು ಬ್ಯಾಂಕ್ ರಜಾದಿನಗಳು, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರಗಳಂತಹ ನಿಯಮಿತ ರಜಾದಿನಗಳನ್ನು ಸಹ ಒಳಗೊಂಡಿದ್ದು, ಇವುಗಳ ಹೊರತಾಗಿ ನವೆಂಬರ್ 1,8,11 ಮತ್ತು 23 ರಂದು ರಜಾದಿನಗಳನ್ನು ಆರ್ ಬಿಐ ಘೋಷಿಸಿದೆ.

- Advertisement -

ಕೆಲವು ಬ್ಯಾಂಕ್ ರಜಾದಿನಗಳು ರಾಜ್ಯಕ್ಕೆ ಸೀಮಿತವಾಗಿದ್ದರೆ, ದೇಶೀಯ ಬ್ಯಾಂಕುಗಳು ರಾಷ್ಟ್ರೀಯ ರಜಾದಿನಗಳಲ್ಲಿ ಮುಚ್ಚಲ್ಪಡುತ್ತವೆ.

ನವೆಂಬರ್ 2022 ರಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ನವೆಂಬರ್ 1: ಕನ್ನಡ ರಾಜ್ಯೋತ್ಸವ/ಕುಟ್ ಉತ್ಸವ. ಬೆಂಗಳೂರು ಮತ್ತು ಮಣಿಪುರದ ರಾಜಧಾನಿ ಇಂಫಾಲದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ನವೆಂಬರ್ 6: ಭಾನುವಾರ

ನವೆಂಬರ್ 8: ಗುರುನಾನಕ್ ಜಯಂತಿ/ ಕಾರ್ತಿಕ ಪೂರ್ಣಿಮ. ಅಹಮದಾಬಾದ್, ಬೆಂಗಳೂರು, ಚೆನ್ನೈ, ಅಗರ್ತಲಾ, ಗ್ಯಾಂಗ್ಟಾಕ್, ಗುವಾಹಟಿ, ಇಂಫಾಲ್, ಕೊಚ್ಚಿ, ಪಣಜಿ, ಶಿಲ್ಲಾಂಗ್, ಪಾಟ್ನಾ ಮತ್ತು ತಿರುವನಂತಪುರಂ ಹೊರತುಪಡಿಸಿ ಉಳಿದೆಲ್ಲ ನಗರಗಳಲ್ಲಿ ಬ್ಯಾಂಕ್ ಮುಚ್ಚಲಿದೆ.

ನವೆಂಬರ್ 11: ಕನಕದಾಸ ಜಯಂತಿ/ ವಾಂಗಲ ಉತ್ಸವ. ಬೆಂಗಳೂರು ಮತ್ತು ಶಿಲ್ಲಾಂಗ್ ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ

ನವೆಂಬರ್ 12: ಎರಡನೇ ಶನಿವಾರ

ನವೆಂಬರ್ 13: ಭಾನುವಾರ

ನವೆಂಬರ್ 20: ಭಾನುವಾರ

ನವೆಂಬರ್ 23: ಸೆಂಗ್ ಕುಟ್ಸ್ ನೆಮ್. ಶಿಲ್ಲಾಂಗ್ ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ನವೆಂಬರ್ 26: ನಾಲ್ಕನೇ ಶನಿವಾರ

ನವೆಂಬರ್ 27: ಭಾನುವಾರ.

1881 ರ ಭಾರತೀಯ ರಿಸರ್ವ್ ಬ್ಯಾಂಕ್ ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ರಜೆ.

ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ ಮತ್ತು ಬ್ಯಾಂಕ್ ಗಳ ಖಾತೆಗಳನ್ನು ಮುಚ್ಚುವುದು ಸೇರಿದಂತೆ ರಜಾದಿನಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿದೆ.

Join Whatsapp