ಬೆಂಕಿ ಅವಘಡ: ಧಗಧಗನೇ ಹೊತ್ತಿ ಉರಿದ ಬಸ್

Prasthutha|

ಮುಂಬೈ: ಬಸ್ಸೊಂದು ಬೆಂಕಿಗಾಹುತಿಯಾದ ಘಟನೆ ಪುಣೆ ನಗರದಲ್ಲಿ ನಡೆದಿದೆ.

- Advertisement -


ಯರವಾಡ ಏರಿಯಾದ ಶಾಸ್ತ್ರಿ ಚೌಕ್ ನಲ್ಲಿ ಬೆಳಗ್ಗೆ 11:30 ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಿಂದ ಅದೃಷ್ಟವಶಾತ್ 42 ಪ್ರಯಾಣಿಕರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಬಸ್ ಯಾವತ್ಮಲ್ ನಿಂದ ಪುಣೆ ಕಡೆಗೆ ಸಂಚರಿಸುತ್ತಿತ್ತು. ಈ ವೇಳೆ ಬಸ್ ನ ಇಂಜಿನ್ ಭಾಗದಲ್ಲಿ ಹೊಗೆ ಬರುವುದನ್ನು ಚಾಲಕ ಹಾಗೂ ನಿರ್ವಾಹಕರು ಗಮನಿಸಿದ್ದಾರೆ. ಪ್ರಯಾಣಿಕರು ಇಳಿಯುತ್ತಿದ್ದಂತೆಯೇ ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

Join Whatsapp