ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣ ದೊಡ್ಡ ತಿರುವು ಪಡೆದಿದ್ದು, ಆಕೆ ಇನ್ನೂ ಕಾಶ್ಮೀರದಲ್ಲಿ ಜೀವಂತವಾಗಿರುವುದಾಗಿ ಶೀನಾ ಬೋರಾ ತಾಯಿ ಹಾಗೂ ಆರೋಪಿ ಇಂದ್ರಾಣಿ ಮುಖರ್ಜಿ ಹೇಳುವ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ ಕೊಲೆ ಪ್ರಕರಣ ದೊಡ್ಡ ತಿರುವೊಂದನ್ನು ಪಡೆದುಕೊಂಡಿದೆ.
ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಇಂದ್ರಾಣಿ ಮುಖರ್ಜಿ ಪತ್ರ ಬರೆದಿದ್ದಾರೆ. ‘ತಮ್ಮ ಸಹ-ಕೈದಿಯೊಬ್ಬರು ಕಾಶ್ಮೀರದಲ್ಲಿ ಶೀನಾಳನ್ನು ನೋಡಿರುವುದಾಗಿ ಹೇಳಿದ್ದಾರೆ. ಕೂಡಲೇ ಅವಳನ್ನು ಹುಡುಕಿ’ ಎಂದು ಸಿಬಿಐಗೆ ಸದ್ಯ ಬೈಕುಲ್ಲಾ ಜೈಲಿನಲ್ಲಿರುವ ಮಾಜಿ ಮಾಧ್ಯಮ ಕಾರ್ಯನಿರ್ವಹಣಾಧಿಕಾರಿ ಇಂದ್ರಾಣಿ ಮುಖರ್ಜಿ ಇಂದ್ರಾಣಿ ಮುಖರ್ಜಿ ಪತ್ರ ಬರೆದಿದ್ದಾಳೆ.
ತನ್ನ 24ನೇ ವಯಸ್ಸಿನಲ್ಲಿ (ಏ. 24, 2012ರಲ್ಲಿ) ಶೀನಾ ಬೋರಾ ಹತ್ಯೆಗೀಡಾಗಿದ್ದರು. ಹತ್ಯೆ ಪ್ರಕರಣದಲ್ಲಿ ಇಂದ್ರಾಣಿ ಅವರಲ್ಲದೆ, ಅವರ ಮೊದಲ ಪತಿ ಸಂಜೀವ್ ಖನ್ನಾ, ಅವರ ಎರಡನೇ ಪತಿಯಾದ ಪತ್ರಿಕೋದ್ಯಮಿ ಪೀಟರ್ ಮುಖರ್ಜಿ ಕೂಡ ಆರೋಪಿಗಳಾಗಿದ್ದಾರೆ.