ಕಾಸರಗೋಡು | 23 ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

Prasthutha|

ಕಾಸರಗೋಡು: ಹೆಚ್ಚುತ್ತಿರುವ ಕೊರೊನಾ ಮಹಾಮಾರಿ ಸೋಂಕಿನ ಹಿನ್ನಲೆಯಲ್ಲಿ ಜಿಲ್ಲೆಯ 23 ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

- Advertisement -

ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣ ಹಿನ್ನಲೆಯಲ್ಲಿ ನೀಲೇಶ್ವರ, ಕಾಞಂಗಾಡು ನಗರಸಭೆಗಳ ಸಹಿತ 23 ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ. 144 ನಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ನಿಷೇಧಾಜ್ಞೆ ಘೋಷಿಸಿದ್ದಾರೆ.

ಕಾಞಂಗಾಡು, ನೀಲೇಶ್ವರ ನಗರಸಭೆಗಳು, ಗ್ರಾಮ ಪಂಚಾಯತ್ ಗಳಾದ ಮಧೂರು, ಮಂಗಲ್ಪಾಡಿ, ಚೆಂಗಳ, ಚೆಮ್ನಾಡು, ಬೇಡಡ್ಕ, ಅಜಾನೂರು, ಬಳಾಲ್, ಚೆರುವತ್ತೂರು, ಈಸ್ಟ್ ಏಳೇರಿ, ಕಳ್ಳಾರ್, ಪಳ್ಳಿಕ್ಕರೆ, ಉದುಮಾ, ಪಡನ್ನ, ಕಯ್ಯೂರು-ಚೀಮೇನಿ, ಕಿನಾನೂರು-ಕರಿಂದಳಂ, ಕೋಡೋಂ-ಬೇಳೂರು, ತ್ರಿಕರಿಪುರ, ವೆಸ್ಟ್ ಏಳೇರಿ, ಪಿಲಿಕೋಡ್ ಗಳ ಎಲ್ಲ ಪ್ರದೇಶಗಳಲ್ಲಿ ನಿಷೇಧಾಜ್ಞೆಯಿದೆ. ನಿಷೇಧಾಜ್ಞೆ ಜಾರಿಗೊಡಿರುವ ಪ್ರದೇಶಗಳಲ್ಲಿ ಜನಗುಂಪು ಸೇರಬಾರದು. ಮೇ 6ರ ರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ

Join Whatsapp