ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಿ: ಡಾ.ಮಹೇಶ ಜೋಶಿ

Prasthutha|

ಬೆಂಗಳೂರು: ಕನ್ನಡಿಗರ ಬಹು ನಿರೀಕ್ಷಿತ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨”ವನ್ನು ತಕ್ಷಣದಲ್ಲಿ ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಆಗ್ರಹಿಸಿದ್ದಾರೆ.

- Advertisement -

ಕನ್ನಡಿಗರ ಬಹು ನಿರೀಕ್ಷಿತ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨” ತಕ್ಷಣ ಕಾನೂನಾಗುವ ಮೂಲಕ ಸಮಗ್ರ ಕನ್ನಡದ ಅಭಿವೃದ್ಧಿಗೆ ಕಾರಣವಾಗಬೇಕು ಎನ್ನುವ ಮಹದುದ್ದೇಶ ಸಮಸ್ತ ಕನ್ನಡಿಗರಿಗೆ ಇದೆ. ಆದರೆ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಕಾನೂನಾಗುವ ಭರವಸೆ ಇಟ್ಟುಕೊಂಡವರಿಗೆ ಒಂದು ಅರ್ಥದಲ್ಲಿ ನಿರಾಸೆಯಾಗಿದೆ. “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨”ವನ್ನು ತಕ್ಷಣದಲ್ಲಿ ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಬೇಕು ಎಂದು ಎಂದು ಮನವಿ ಮಾಡಿದ್ದಾರೆ.

ಕನ್ನಡ ಭಾಷೆ ಉಳಿದರೆ ಮಾತ್ರ ಕರ್ನಾಟಕದ ಅಸ್ಮಿತೆ ಇರುವುದಕ್ಕೆ ಸಾಧ್ಯ. ಆದ್ದರಿಂದ  ಭಾಷೆ ಸಂಸ್ಕೃತಿಯ ಉಳಿವಿಗೆ ವಿಧೇಯಕ ಕಾನೂನಾಗಬೇಕಿರುವುದು ಅನಿವಾರ್ಯವಾಗಿದೆ. ಸರಕಾರಕ್ಕೆ ಈ ಬಗ್ಗೆ ಸಾಕಷ್ಟು ಬಾರಿ ಮನವರಿಕೆ ಮಾಡಿಕೊಟ್ಟಿದ್ದು. ಸದನದಲ್ಲಿ ಪಕ್ಷಬೇದ ಮರೆತು “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨” ದ ಕುರಿತು ಸಮಗ್ರ ಚರ್ಚೆ ನಡೆಸಿ ಕಾನೂನು ಮಾಡುವುದಕ್ಕೆ ಬೆಂಬಲ ವ್ಯಕ್ತ ಪಡಿಸುತ್ತೇವೆ ಎನ್ನುವ ಭರವಸೆಯನ್ನು ಎಲ್ಲಾ ಪಕ್ಷದ ನಾಯಕರು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿರುತ್ತಾರೆ. “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨” ಕಾನೂನು ಮಾಡುವದಕ್ಕೆ ಎಲ್ಲರ ಒಮ್ಮತದ ಒಪ್ಪಿಗೆ ಇರುವುದರಿಂದ ಆದಷ್ಟು ಬೇಗ ಕಾನೂನು ಜಾರಿಯಾಗಬೇಕು ಎಂದು ತಿಳಿಸಿದರು.

- Advertisement -

   ನ್ಯಾಯಮೂರ್ತಿ ಶ್ರೀ ಎಸ್.ಆರ್. ಬನ್ನೂರಮಠ* ನೇತೃತ್ವದ ಕರ್ನಾಟಕ ಕಾನೂನು ಆಯೋಗವು ತನ್ನ ಐವತ್ತೇಳನೇ ವರದಿಯಲ್ಲಿ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨” ಅನ್ನು ಸಿದ್ಧಪಡಿಸಿ, ವರದಿಯ ಅನುಷ್ಠಾನಕ್ಕಾಗಿ ಅಗತ್ಯ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಈ ವರದಿಯಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶಗಳನ್ನು ಒದಗಿಸುವುದಕ್ಕಾಗಿ ಉಪಬಂಧ ಕಲ್ಪಿಸುವ ಒಂದು ವಿಧೇಯಕ ಎಂದು ಸ್ಪಷ್ಟವಾಗಿ ನಮೂದಿಸಲಾಗಿತ್ತು. ಈ ವಿಧೇಯಕವನ್ನು ಕಾನೂನು ಆಗುವ ಸಂಬAಧ ದಿನಾಂಕ ೨೨-೦೯-೨೦೨೨ ರಂದು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ವಿ ಸುನಿಲ್ ಕುಮಾರ್ ಅವರು ವಿಧಾನಸಭೆಯ ಅಧಿವೇಶನದಲ್ಲಿ ವಿಧೇಯಕ ಮಂಡಿಸಿದ್ದರು ಎಂದು ನಾಡೋಜ ಡಾ. ಮಹೇಶ ಜೋಶಿ ನೆನಪಿಸಿದರು.

  ಇದರ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಅಕ್ಟೋಬರ್ ೧೦ರಂದು ಶ್ರೀಕೃಷ್ಣ ಪರಿಷತ್ತಿನ ಮಂದಿರದಲ್ಲಿ ಚಿಂತನ-ಮಂಥನವನ್ನು ಏರ್ಪಡಿಸಿತ್ತು. ನಾಡಿನ ಹಿರಿಯ ಬರಹಗಾರರಾದ ಡಾ.ಎಸ್. ಎಲ್.ಭೈರಪ್ಪ, ಡಾ.ಚಂದ್ರಶೇಖರ ಕಂಬಾರ, ದೊಡ್ಡರಂಗೇಗೌಡ ಸೇರಿದಂತೆ ಅನೇಕ ಬರಹಗಾರರು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ ಅರಳಿ ನಾಗರಾಜ, ಶ್ರೀ ಎಚ್.ಎಸ್.ನಾಗಮೋಹನ ದಾಸ್ ಸೇರಿದಂತೆ ವಿವಿಧ ಗಣ್ಯರು, ವಿಷಯ ತಜ್ಞರು ಭಾಗವಹಿಸಿ ವಿಚಾರ ಮಂಡಿಸಿದ್ದರು. ಇದನ್ನು ತಮ್ಮ ಗಮನಕ್ಕೆ ತರಲಾಗಿತ್ತು, ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨;ವು ಕಾನೂನಾಗುವ ಅಗತ್ಯತೆಯನ್ನು ಪ್ರತಿಯೊಬ್ಬ ಜನಪ್ರತಿನಿಧಿಗೂ ಅರ್ಥವಾಗುವಂತೆ ತಿಳಿಸುವ ಪ್ರಯತ್ನವನ್ನು ಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತು ೧೨-೧೦-೨೦೨೨ ರಂದು ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨;  ಕುರಿತಂತೆ ಕನ್ನಡದ ಮಠಗಳು, ನ್ಯಾಯಾಂಗ, ಸಾಹಿತ್ಯ, ಶಿಕ್ಷಣ, ಮಾಧ್ಯಮ, ಕಾನೂನು, ಚಲನಚಿತ್ರ ರಂಗ, ಉದ್ಯೋಗ, ಕೈಗಾರಿಕೆ, ಸೇರಿದಂತೆ ಪ್ರಮುಖ ಕ್ಷೇತ್ರಗಳ ಪರಿಣಿತರನ್ನು ಸೇರಿಸಿ ʻಚಿಂತನಾ ಗೋಷ್ಠಿʼಯನ್ನು ಪರಿಷತ್ತು ಹಮ್ಮಿಕೊಂಡು ಸುದೀರ್ಘವಾಗಿ ಚರ್ಚೆಸಿ, ವಿಧೇಯಕದಲ್ಲಿನ ಕೆಲವು ಕಲಂಗಳು ಪರಿಷ್ಕರಣೆಯಾಗಬೇಕು ಹಾಗೂ ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಹಾಗೂ ಎಲ್ಲ ಕನ್ನಡ ಸಂಘಗಳಿಗೆ ಮಾತೃ ಸಂಸ್ಥೆಯಾದ ಮತ್ತು ಸರಕಾರದಿಂದ ʻರಾಜ್ಯ ಸಚಿವ ಸ್ಥಾನಮಾನʼ ಗೌರವವನ್ನು ಹೊಂದಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರನ್ನು ʻರಾಜ್ಯಮಟ್ಟದ ಸಮಿತಿಗೆ ಉಪಾಧ್ಯಕ್ಷರಾಗಬೇಕುʼ ಎಂದು ಒಕ್ಕೊರಲಿನಿಂದ ಹೇಳಿ, ಜಿಲ್ಲಾ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಚುನಾಯಿತ ಅಧ್ಯಕ್ಷರುಗಳು ಇರುವಂತೆ, ತಾಲೂಕು ಮಟ್ಟದ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರು ಕಾರ್ಯನಿರ್ವಹಿಸಬೇಕು. ಜೊತೆಗೆ ಸರಕಾರಿ ಅಧಿಕಾರೇತರ ಸದಸ್ಯರುಗಳು ಈ ಸಮಿತಿಯಲ್ಲಿ ಇರಬೇಕು ಎಂಬ ಸರ್ವಾನುಮತದ ಸಲಹೆಯನ್ನು ನೀಡಲಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದರು. 

 ಕನ್ನಡಿಗರೆಲ್ಲರ ಆಶೋತ್ತರವಾಗಿದ್ದ  ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕʼವನ್ನು ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶದಲ್ಲಿಯೇ ಅಂಗೀಕರಿಸಿ ಕಾನೂನಾಗಿಸುವುದಾಗಿ  ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು  ಕನ್ನಡ ಸಾಹಿತ್ಯ ಪರಿಷತ್ತಿಗೆ ಭುವನೇಶ್ವರಿಯ ಪ್ರತಿಮೆ ಅನಾವರಣಗೊಳಿಸುವ ಸಂದರ್ಭದಲ್ಲಿ ಭರವಸೆ ನೀಡಿದ್ದರು.  ರಾಜ್ಯ ಸರ್ಕಾರ  ಈ ಮಹತ್ವದ ಹೆಜ್ಜೆ ವ್ಯರ್ಥವಾಗ ಬಾರದು. ಈ ಕೂಡಲೇ  ʼಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕʼವನ್ನು ಸುಗ್ರಿವಾಜ್ಞೆಯ ರೂಪದಲ್ಲಿ ಕೂಡಲೇ ವಿಧೇಯಕವಾಗಿಸ ಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ.ಡಾ.ಮಹೇಶ ಜೋಶಿಯವರು  ಆಗ್ರಹಿಸಿದ್ದಾರೆ.

Join Whatsapp