ಕಾಸರಗೋಡು: ಬಸ್ ಚಕ್ರದಡಿ ಸಿಲುಕಿ 3 ವರ್ಷದ ಬಾಲಕ ಮೃತ್ಯು

Prasthutha|

ಕಾಸರಗೋಡು: ಖಾಸಗಿ ಬಸ್ಸೊಂದರ ಚಕ್ರದಡಿ ಸಿಲುಕಿ 3 ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಚೆರ್ಕಳದಲ್ಲಿ ನಡೆದಿದೆ.

- Advertisement -

ಚೆರ್ಕಳದ ಹೊಸ ಬಸ್ ನಿಲ್ದಾಣದಲ್ಲಿ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಬಸ್ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿದ್ದ ತಾಯಿ ಮತ್ತು ಮಗನಿಗೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದು ಬಾಲಕನ ಮೇಲೆಯೇ ಚಲಿಸಿದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಪೆರಿಯ ಪಂಚಾಯತ್ನ ಪೆರಿಯತ್ತಡುಕ್ಕಂ ನಿವಾಸಿಗಳಾದ ಆಶಿಕ್ ಮತ್ತು ಝುಬೈದಾ ದಂಪತಿಯ ಮೂರು ವರ್ಷದ ಪುತ್ರ ಅಬ್ದುಲ್ ವಾಹಿದ್ ಮೃತಪಟ್ಟ ಬಾಲಕನಾಗಿದ್ದಾನೆ.

- Advertisement -

ಬಸ್ ಚಕ್ರಗಳ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ವಾಹಿದ್ ನನ್ನು ಜಾಕ್ ಬಳಸಿ ಚಕ್ರಗಳ ಅಡಿಯಿಂದ ತೆಗೆದು ಕೂಡಲೇ ಚೆಂಗಳದಲ್ಲಿರುವ ಇ.ಕೆ.ನಾಯನಾರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬಾಲಕ ಮೃತಪಟ್ಟಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

Join Whatsapp