ಅಕ್ರಮ ಗಣಿಗಾರಿಕೆ: ಜಾರ್ಖಂಡ್ ಸಿಎಂಗೆ ಸರ್ವೋಚ್ಚ ನ್ಯಾಯಾಲಯದಿಂದ ರಿಲೀಫ್

Prasthutha|

ನವದೆಹಲಿ: ಅಕ್ರಮ ಗಣಿಗಾರಿಕೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ಜಾರ್ಖಂಡ್ ಉಚ್ಚ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಪ್ರಶ್ನಿಸಲು ಸರ್ವೋಚ್ಚ ನ್ಯಾಯಾಲಯವು ಅವಕಾಶ ನೀಡಿದ್ದರಿಂದ ಸದ್ಯ ಅವರಿಗೆ ನೆಮ್ಮದಿ ದೊರೆತಿದೆ.

- Advertisement -

ಪಿಐಎಲ್- ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಮೇಲೆ ಜಾರ್ಖಂಡ್ ಉಚ್ಚ ನ್ಯಾಯಾಲಯವು ಮುಖ್ಯಮಂತ್ರಿ ವಿರುದ್ಧ ತೀರ್ಪು ನೀಡಿತ್ತು.

2021ರಲ್ಲಿ ಮುಖ್ಯಮಂತ್ರಿ ಸೊರೇನ್ ನೀಡಿದ ಗಣಿಗಾರಿಕೆ ಪರವಾನಿಗೆಯ ಅಕ್ರಮ ಸಂಬಂಧವಾಗಿ ಬಿಜೆಪಿಯ ಒತ್ತಾಯದ ಕಾರಣಕ್ಕೆ ಹೇಮಂತ್ ಸೊರೇನ್ ಅವರು ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದರು. ರಾಷ್ಟ್ರೀಯ ಚುನಾವಣಾ ಆಯೋವು ಸೊರೇನ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ರಾಜ್ಯಪಾಲ ರಮೇಶ್ ಬೈಸ್ ರಿಗೆ ಪತ್ರ ಬರೆದಿತ್ತು. ಮುಖ್ಯಮಂತ್ರಿ ಹೇಮಂತ್ ಅವರು ಮುಚ್ಚಿದ ಲಕೋಟೆಯನ್ನು ಕೂಡಲೆ ತೆರೆಯುವಂತೆ ಒತ್ತಾಯ ಮಾಡಿದರೂ ರಾಜ್ಯಪಾಲರು ಆ ಬಗ್ಗೆ ಮಾನಸಿಕ ತೂಗುಯ್ಯಾಲೆಯಲ್ಲಿ ಇದ್ದರು.

- Advertisement -

ಅಕ್ರಮ ಗಣಿಗಾರಿಕೆ ಸಂಬಂಧ ಇಡಿ- ಜಾರಿ ನಿರ್ದೇಶನಾಲಯವು ಸೊರೇನ್ ಅವರ ಸಹಾಯಕ ಪಂಕಜ್ ಮಿಶ್ರಾ ಮತ್ತಿಬ್ಬರನ್ನು ಜುಲೈಯಲ್ಲಿ ದಾಳಿ ನಡೆಸಿ ಬಂಧಿಸಿತ್ತು. ಮಿಶ್ರಾ ಬ್ಯಾಂಕು ಖಾತೆಯಲ್ಲಿ ರೂ. 11.88 ಕೋಟಿ ರೂಪಾಯಿ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಮಿಶ್ರಾರ ಮನೆಯಲ್ಲಿ ಲೆಕ್ಕ ಇಟ್ಟಿರದ ರೂ. 5.34 ಕೊಟಿ ಸಿಕ್ಕಿದ್ದಾಗಿಯೂ ಇಡಿ ಹೇಳಿದೆ. ಮೂರು ತಿಂಗಳ ಹಿಂದೆ ಇ.ಡಿ.ಅಧಿಕಾರಿಗಳು ಸೊರೇನ್ ರ ಪತ್ರಿಕಾ ಸಲಹೆಗಾರ ಅಭಿಷೇಕ್ ಪ್ರಸಾದ್ ರನ್ನು ಪ್ರಶ್ನಿಸಿತ್ತು.

ಮುಖ್ಯ ಆರೋಪಿ ಮಿಶ್ರಾ ಮನೆಯಲ್ಲಿ ಹೇಮಂತ್ ಸೊರೇನ್ ಬ್ಯಾಂಕು ಪಾಸ್ ಬುಕ್ ಹಾಗೂ ಅವರು ಸಹಿ ಮಾಡಿದ್ದ ಚೆಕ್ ಗಳು ಸಹ ಪತ್ತೆಯಾಗಿರುವುದಾಗಿ ಜಾರಿ ನಿರ್ದೇಶನಾಲಯ ಹೇಳಿದೆ.
ಪಂಕಜ್ ಮಿಶ್ರಾ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ರಾಜಕೀಯ ಪ್ರತಿನಿಧಿಯಾಗಿ ಅವರ ಬರೈತ್ ವಿಧಾನ ಸಭಾ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ ನಿರ್ವಹಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆಪಾದಿಸಿದೆ.



Join Whatsapp