ಚೆನ್ನೈ: ತಮಿಳುನಾಡಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಟ ವಿಜಯ್ ಅಭಿಮಾನಿ ಬಳಗ ‘ವಿಜಯ್ ಮಕ್ಕಳ್ ಇಯಕ್ಕಂ’ ಗಮನಾರ್ಹ ಗೆಲುವು ಸಾಧಿಸಿದೆ.
ಅಕ್ಟೋಬರ್ 6 ಮತ್ತು 9 ರಂದು ರಾಜ್ಯದಲ್ಲಿ ಹೊಸದಾಗಿ ರಚನೆಯಾದ ಆರು ಜಿಲ್ಲೆಗಳಿಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ‘ವಿಜಯ್ ಮಕ್ಕಳ್ ಇಯಕ್ಕಂ’ ಒಟ್ಟು 109 ವಾರ್ಡ್ ಗಳಲ್ಲಿ ಜಯಭೇರಿ ಭಾರಿಸಿದೆ.
ಸಾಮಾಜಿಕ ಸೇವಾ ಚಟುವಟಿಕೆಗಳಿಗಾಗಿ ಸ್ಥಾಪಿಸಿದ್ದ ‘ವಿಜಯ್ ರಸಿಕರ್ ಮಂಡ್ರಮ್’ ಎಂಬ ವಿಜಯ್ ಅಭಿಮಾನಿ ಬಳಗವನ್ನು ‘ವಿಜಯ್ ಮಕ್ಕಳ್ ಇಯಕ್ಕಮ್’ ಎಂದು ಮಾರ್ಪಾಡು ಮಾಡಲಾಗಿತ್ತು.