ದಮ್ಮಾಮ್: ಐ.ಎಫ್.ಎಫ್ ನಿಂದ ಕೋವಿಡ್ ಜಾಗೃತಿ ಸಭೆ

Prasthutha|

ದಮ್ಮಾಮ್ : ಇಂಡಿಯಾ ಫ್ರೆಟರ್ನಿಟಿ ಫೋರಮ್, ದಮ್ಮಾಮ್, ಕರ್ನಾಟಕ ರಾಜ್ಯ ಘಟಕ ಆಯೋಜಿಸಿದ ಕೋವಿಡ್ 19 ಜಾಗೃತಿ ಕಾರ್ಯಕ್ರಮವು ಝೂಮ್ ಮೂಲಕ ಮೇ 21, 2021ರ ಶುಕ್ರವಾರ ಸಂಜೆ ನಡೆಯಿತು. ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಿದ ಸಮಾಜ ಸೇವಕ ಅಬ್ದುಲ್ ಖಾದರ್ ಮಂಗಳೂರು, “ಕೋವಿಡ್ ಎರಡೇ ಅಲೆಯೂ ದೇಶದಾದ್ಯಂತ ಹೆಚ್ಚಾಗುತ್ತಿದ್ದು ಅದೆಷ್ಟೋ ಜನರು ಔಷದಿ ಫಲಕಾರಿಯಾಗದೆ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲೂ ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ಎರಡನೇ ಅಲೆಯು ಜನರ ಶ್ವಾಸಕೋಶ ಭಾಗಕ್ಕೆ ಮಾರಕವಾಗಿ ಪರಿಣಮಿಸಿದ್ದರಿಂದ ದಿನದಿಂದ ದಿನಕ್ಕೆ ಜನರು ಸಾವನ್ನಪ್ಪುತ್ತಿದ್ದಾರೆ. ಈ ಸಂದರ್ಭದಲ್ಲಿ ಕೋವಿಡ್ ಮಹಾಮಾರಿಗೆ ಹೆದರದೆ ಮುಂಜಾಗ್ರತೆ ಕ್ರಮವನ್ನು ಪಾಲಿಸ ಬೇಕಾಗಿದೆ ಮತ್ತು ಜನರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ವನ್ನು ತುಂಬಬೇಕಾಗಿದೆ. ಇದರಿಂದ ಮಾತ್ರ ನಮಗೆ ಕೋವಿಡ್ ನೊಂದಿಗೆ ವಿಜಯ ಹೊಂದಲು ಸಾಧ್ಯ” ಎಂದು ಹೇಳಿದರು.

- Advertisement -

“ಎಷ್ಟೋ ಸಂಘ ಸಂಸ್ಥೆಗಳು ಕೋವಿಡ್ ಕುರಿತು ಜಾಗೃತಿಯನ್ನು ಮೂಡಿಸುತ್ತಿವೆ. ಎಲ್ಲಾ ಮೊಹಲ್ಲಾ, ಜಮಾಅತ್ ಗಳ ಮೂಲಕ ಜನಜಾಗೃತಿ ನಡಯಬೇಕು. ಕೋವಿಡ್ ಮುಂಜಾಗೃತಾ ಕ್ರಮಗಳ ಕುರಿತ ಮಾಹಿತಿ ಹರಡುವಿಕೆ, ಲಸಿಕೆ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳು ಜಮಾಅತಿನ ಮೂಲಕ ನಡೆಯಬೇಕಾದದ್ದು ಅತ್ಯಗತ್ಯ . ಲಸಿಕೆ ನೀಡಿದರೆ ಮಕ್ಕಳಾಗುವುದಿಲ್ಲ ಅಡ್ಡ ಪರಿಣಾಮವುಂಟಾಗುತ್ತದೆಯೆಂಬ ತಪ್ಪು ಕಲ್ಪನೆಗೆ ಬಲಿಯಾಗುವುದು ಬೇಡ. ಯಾರಿಗೆಲ್ಲ ಲಸಿಕೆ ಅಗತ್ಯವಿದೆ, ಅವರಿಗೆ ಮೊದಲ ಆದ್ಯತೆಯನ್ನು ಕೊಡಬೇಕು. ಅದಲ್ಲದೆ ಕೋರೋನ ಭಾದಿತ ವ್ಯಕ್ತಿ ಅದನ್ನು ನಿವಾರಣೆಗಾಗಿ ಕಷಾಯ ಇನ್ನಿತರ ನಾಟಿ ಮದ್ದು ಸಾಕು ಎಂದು ಮನೆಯಲ್ಲಿ ಕೂರದೆ ಪಕ್ಕದಲ್ಲಿರುವ ವೈದ್ಯರೊಂದಿಗೆ ಭೇಟಿ ಮಾಡಿ ಅವರು ನೀಡಿದ ಸಲಹೆ ಪ್ರಕಾರ ನಡೆಯುವುದು ಉತ್ತಮ” ಎಂದು ಅವರು ಹೇಳಿದರು.

” ಕ್ಯಾನ್ಸರ್ ರೋಗಿಗಳು ಮತ್ತು ಬೇರೆ ಬೇರೆ ಖಾಯಿಲೆಗಳಿದ್ದವರೂ ಕೊರೋನಾದಿಂದ ಚೇತರಿಸಿ ಕೊಂಡವರು ತುಂಬಾ ಮಂದಿ ಇದ್ದಾರೆ. ಮಾಹಿತಿ ಇಲ್ಲದೆ ಕೋವಿಡ್ ಗೆ ಜನರು ಹೆದರುತ್ತಿದ್ದಾರೆ. ಅಂತವರಿಗೆ ನಾವು ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಾಗಿದೆ. ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಬೇಕಾಗಿದೆ” ಎಂದು ಅವರು ಹೇಳಿದರು. ಇಂಡಿಯಾ ಫ್ರೆಟರ್ನಿಟಿ ದಮ್ಮಾಮ್ ಕರ್ನಾಟಕ ಘಟಕದ ಅಧ್ಯಕ್ಷ ಸಾಜಿದ್ ವಳವೂರ್ ಕಾರ್ಯಕ್ರಮವನ್ನು ಸಮಾರೋಪಿಸಿದರು. ಕಾರ್ಯದರ್ಶಿ ನಿಶಾಫ್ ಅಹ್ಮದ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.



Join Whatsapp