“ನನ್ನನ್ನು ನಂಬಿಸಿ ಲೈಂಗಿಕವಾಗಿ ಬಳಸಿ ಈಗ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ” : AIADMK ಮಾಜಿ ಸಚಿವನ ವಿರುದ್ಧ ತಮಿಳು ನಟಿಯ ಆರೋಪ

Prasthutha|

►5 ವರ್ಷ ರಹಸ್ಯ ಸಂಸಾರ ನಡೆಸಿದ್ದ ಮಾಜಿ ಸಚಿವ !

- Advertisement -

ತಮಿಳುನಾಡಿನ ರಾಜಕೀಯದಲ್ಲಿ ಮತ್ತೊಮ್ಮೆ ಲೈಂಗಿಕ ಹಗರಣದ ಬಿರುಗಾಳಿಯೆದ್ದಿದೆ. ರಾಜ್ಯದ ಈ ಹಿಂದಿನ ಎಐಎಡಿಎಂಕೆ ಸರ್ಕಾರದಲ್ಲಿ ಸಚಿವರಾಗಿದ್ದ ಮಣಿಕಂಡನ್ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ನನ್ನ ಜೊತೆ 5 ವರ್ಷಗಳ ಕಾಲ ರಹಸ್ಯ ಜೀವನ ನಡೆಸಿದ್ದಾರೆ. ಮಾತ್ರವಲ್ಲದೆ ಆ ವೇಳೆ ಅವರು ನನ್ನೊಂದಿಗಿರುವ ಹಲವಾರು ಖಾಸಗಿ ಕ್ಷಣಗಳ ಫೋಟೋ ಮತ್ತು ವೀಡಿಯೋಗಳನ್ನು ತೆಗೆದು ಇಟ್ಟುಕೊಂಡಿದ್ದು, ಈಗ ನನ್ನನ್ನು ಮದುವೆಯಾಗುವಂತೆ ಹೇಳಿದಾಗ ಅವುಗಳನ್ನು ಇಟ್ಟುಕೊಂಡು ಬೆದರಿಸುತ್ತಿದ್ದಾರೆ ಎಂದು ತಮಿಳು ಚಿತ್ರ ನಟಿ ಶಾಂತಿನಿ ದೇವಾ ಎಂಬವರು ಆರೋಪಿಸಿದ್ದಾರೆ.

ನನ್ನ ವೀಡೀಯೋ ಹಾಗೂ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಕೂಡಾ ಮಣಿಗಂಡನ್ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿ  ಶಾಂತಿನಿ ದೇವಾ ಅವರು ಚೆನ್ನೈ ಪೊಲೀಸ್ ಆಯುಕ್ತರಿಗೆ ಇಂದು ದೂರು ನೀಡಿದ್ದಾರೆ.

- Advertisement -


ಈ ಹಿಂದೆ ತಮಿಳುನಾಡಿನಲ್ಲಿ ಶಶಿಕಲಾ ಅವರು ಲಂಚ ಪ್ರಕರಣದಲ್ಲಿ ಜೈಲು ಪಾಲಾದಾಗ, ಅಂದಿನ ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಸರ್ಕಾರದಲ್ಲಿ ನಮಗೆ ವಿಶ್ವಾಸ ಇಲ್ಲ ಎಂದು ಆರೋಪಿಸಿ ಟಿಟಿವಿ ದಿನಕರನ್ ಬೆಂಬಲಿತ 18 ಜನ ಶಾಸಕರು ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ತದನಂತರ ಆ ಎಲ್ಲಾ ಶಾಸಕರ ಅಧಿಕಾರವನ್ನೂ ನ್ಯಾಯಾಲಯ ಮೊಟಕುಗೊಳಿಸಿ, ಅವರನ್ನು ಅನರ್ಹರು ಎಂದು ಘೋಷಿಸಿತ್ತು. ಈ 18 ಜನ ಶಾಸಕರು ಮತ್ತು ಸಚಿವರಲ್ಲಿ ಆರೋಪಿ ಮಣಿಗಂಡನ್ ಸಹ ಒಬ್ಬರು ಎಂಬುದು ಉಲ್ಲೇಖಾರ್ಹ.

ನಟಿ ಶಾಂತಿನಿ ದೇವಾ ತಾನು ಓರ್ವ ನಟಿಯಾಗಬೇಕು ಎಂಬ ಆಸೆಯಿಂದ ಚೆನ್ನೈಗೆ ಬಂದವರು. ಆದರೆ ದುರದೃಷ್ಟವಶಾತ್ ಅವರಿಗೆ ಸಿನಿಮಾದಲ್ಲಿ ಒಳ್ಳೆಯ ಅವಕಾಶಗಳು ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ಸಚಿವ ಮಣಿಗಂಡನ್ ಪರಿಚಯವಾಗಿದೆ. ಆತ ಈಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾರೆ. ಇಬ್ಬರೂ 5 ವರ್ಷ ಒಟ್ಟಿಗೆ ಜೀವನವನ್ನೂ ಮಾಡಿದ್ದಾರೆ. ಆರೋಪಿ ಮಣಿಗಂಡನ್​ ನಟಿಗೆ ಮನೆಯನ್ನೂ ಕೊಡಿಸಿದ್ದಾರೆ. ಆದರೆ, ನಟಿ ಶಾಂತಿನಿ ಇದೀಗ ತನ್ನನ್ನು ಮದುವೆಯಾಗುವಂತೆ ಮಣಿಗಂಡನನ್ನು ಒತ್ತಾಯಿಸಿದ್ದಾಳೆ ಎನ್ನಲಾಗಿದೆ. ಇದಕ್ಕೆ ಒಪ್ಪದ ಮಣಿಗಂಡನ್ ಆಕೆಯ ವೀಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವುದಾಗಿ ಬೆದರಿಸಿದ್ದಾರೆ. ತನಗೆ ಕೊಲೆ ಬೆದರಿಕೆಗಳನ್ನೂ ಹಾಕಿದ್ದಾರೆ. ಹೀಗಿರುವಾಗ ಅವರ ಮೇಲೆ ಎಫ್‌ಐಆರ್ ದಾಖಲಿಸಿ ವಿಚಾರಣೆ ನಡೆಸಬೇಕು ಮತ್ತು ಅವರ ಬಳಿ ಇರುವ ನನ್ನ ಅಶ್ಲೀಲ ಪೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಬೇಕು” ಎಂದು ನಟಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Join Whatsapp