ದೇಶದ ಸಿವಿಲ್ ಸರ್ವಿಸ್ ನಲ್ಲಿ 4000 ಮಂದಿ ಆರ್ ಎಸ್ ಎಸ್ ಕಾರ್ಯಕರ್ತರು: ಕುಮಾರಸ್ವಾಮಿ

Prasthutha|

ರಾಮನಗರ: ಬೆಂಗಳೂರು: ಆರ್ ಎಸ್ ಎಸ್  ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ದೇಶದ ಆಡಳಿತ ವ್ಯವಸ್ಥೆಯಲ್ಲಿ ಆರ್‌ ಎಸ್‌ ಎಸ್‌ ಆರ್ಭಟ ಶುರುವಾಗಿದ್ದು, ಆರ್‌ ಎಸ್‌ ಎಸ್‌ ಸಂಘಟನೆಯ 4 ಸಾವಿರ ಕಾರ್ಯಕರ್ತರು ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗಿದ್ದಾರೆ ಎಂದು ಆರೋಪಿಸಿದ್ದಾರೆ.

- Advertisement -

ಕಾಂಗ್ರೆಸ್ ಸರಿಯಾಗಿ ಇರುತ್ತಿದ್ದರೆ ದೇಶ ಹೀಗಿರುತ್ತಿರಲಿಲ್ಲ. ಕಾಂಗ್ರೆಸ್ ಸ್ವೇಚ್ಛಾವರ್ತನೆಯಿಂದ ಈ ಪರಿಸ್ಥಿತಿ ನಿರ್ಮಾಣ ಆಗಿದೆ. ಕಾಂಗ್ರೆಸ್ ಹೇಗೆ ಆಡಳಿತ ನಡೆಸಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

- Advertisement -

4 ಸಾವಿರ ಸಿವಿಲ್‌ ಸರ್ವೆಂಟ್‌ ಗಳು ಆರ್‌ಎಸ್‌ ಎಸ್‌ ಕಾರ್ಯಕರ್ತರು. ಒಂದೇ ವರ್ಷದಲ್ಲಿ 676 ಆರ್‌ಎಸ್‌ಎಸ್‌ ಕಾರ್ಯಕರ್ತರು ಪಾಸ್‌ ಆಗಿದ್ದಾರೆ. ಇನ್ನು ಆರ್‌ ಎಸ್‌ ಎಸ್‌ ಕಾರ್ಯಕರ್ತರಿಗೆ ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗಲು ತರಬೇತಿ ನೀಡುತ್ತಾರೆ ಎಂದು ಹೇಳಿದ್ದಾರೆ.

ಲಖಿಂಪುರ ಘಟನೆಯಲ್ಲಿ ರೈತರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದಲ್ಲಿರುವುದು ಆರ್‌ ಎಸ್ ಎಸ್ ಸರ್ಕಾರ. ಮನುಸ್ಮೃತಿ ಯುಗಕ್ಕೆ ಕರೆದೊಯ್ಯುವುದು ಆರ್ ಎಸ್ ಎಸ್ ಅಜೆಂಡಾ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ರೈತರ ಮೇಲೆ ಗೌರವ ಇದ್ದರೆ ಕಾರು ಹತ್ತಿಸಿದವರನ್ನು ಮೊದಲು ಬಂಧಿಸಿ. ಕಾರು ಹತ್ತಿಸಿದವರಿಗೆ ಏಕೆ ರಕ್ಷಣೆ ಕೊಟ್ಟಿದ್ದೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.



Join Whatsapp