ಶರಣ್ ಪಂಪ್ವೆಲ್ ಅಪ್ಪನಿಗೆ ಹುಟ್ಟಿದ್ದರೆ ನನ್ನ ಮುಂದೆ ಬರಲಿ: ಫಾಝಿಲ್ ತಂದೆ

Prasthutha|

ಮಂಗಳೂರು: ಪ್ರವೀಣ್ ನೆಟ್ಟಾರ್ ಕೊಲೆಗೆ ಪ್ರತಿಕಾರವಾಗಿ ಸುರತ್ಕಲ್’ನಲ್ಲಿ ಫಾಝಿಲ್ ಕೊಲೆ ನಡೆಸಿದ್ದೇವೆ ಎಂದು ವಿಎಚ್’ಪಿ ಮುಖಂಡ ಶರಣ್ ಪಂಪ್’ವೆಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಫಾಝಿಲ್ ತಂದೆ ಉಮರ್ ಫಾರೂಕ್, ಶರಣ್ ಪಂಪ್ವೆಲ್ ಅಪ್ಪನಿಗೆ ಹುಟ್ಟಿದ್ದರೆ ನನ್ನ ಮುಂದೆ ಬರಲಿ ಎಂದು ಹೇಳಿದ್ದಾರೆ.

- Advertisement -


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳು ಒಳ್ಳೆಯವರು, ಹಿಂದುತ್ವದವರು ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ಒಬ್ಬನಿಗೆ 10 ಮಂದಿ ಹೊಡೆದರೆ ಅವರು ವೀರರಲ್ಲ, ಹೇಡಿಗಳು ಎಂದರು.


ಕೊಲೆಗೆ ಮೂಲ ಕಾರಣ ಶರಣ್, ಆದ್ದರಿಂದ ಆತನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ಮನವಿ ಮಾಡಿದ್ದೇನೆ, ಹಾಗೆಯೇ ಎಡಿಜಿಪಿ ಅವರಿಗೆ ಈಮೇಲ್ ಮಾಡಿದ್ದೇನೆ. ಅಲ್ಲದೆ, ಸುರತ್ಕಲ್ ಪೊಲೀಸರಿಗೆ ದೂರು ದಾಖಲಿಸಿದ್ದೇನೆ. ನಾನು ಕಾನೂನು ರೀತಿ ಹೋರಾಡುತ್ತೇನೆ ಎಂದು ಹೇಳಿದ್ದಾರೆ.



Join Whatsapp