ಭರ್ಜರಿ ಸಂಭಾವನೆ ಗಳಿಸಿದ ‘ಪಠಾಣ್’; ಹೆಮ್ಮೆ ವ್ಯಕ್ತಪಡಿಸಿದ ಕಿಂಗ್ ಖಾನ್

Prasthutha|

ಮುಂಬೈ: ಸಿಂಹಗಳು ಸಂದರ್ಶನಗಳನ್ನು ನೀಡುವುದಿಲ್ಲ, ಹಾಗಾಗಿ ನಾನೂ ನೀಡುವುದಿಲ್ಲ’ ಎಂದು ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಹೇಳಿದ್ದಾರೆ.

- Advertisement -


ಯಾವುದೇ ಪ್ರಚಾರಗಳನ್ನು ಮಾಡದಿದ್ದರೂ ‘ಪಠಾಣ್’ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಬಗ್ಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಈ ರೀತಿ ಉತ್ತರಿಸಿದ್ದಾರೆ.


‘ಪಠಾಣ್’ ಚಿತ್ರಕ್ಕೆ ಅನುಸರಿಸಲಾದ ಪ್ರಚಾರದ ತಂತ್ರದ ಬಗ್ಗೆ ಈ ಬಗ್ಗೆ ಟ್ವೀಟ್ ಮಾಡಿರುವ ಎಸ್ ಆರ್ ಕೆ, ಚಿತ್ರಮಂದಿರಗಳೇ ಅರಣ್ಯ. ನನ್ನನ್ನು ನೋಡಲು ಥಿಯೇಟರ್ಗಳಿಗೆ ಬನ್ನಿ ಎಂದು ಅಭಿಮಾನಿಗೆ ಹೇಳಿದ್ದಾರೆ.

- Advertisement -


‘ಪಠಾಣ್’ ಚಿತ್ರ ಬಿಡುಗಡೆಗೂ ಮೊದಲು ವಿವಾದಕ್ಕೆ ಕಾರಣವಾಗಿತ್ತು.ಚಿತ್ರದ ‘ಬೇಷರಮ್ ರಂಗ್’ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಬಟ್ಟೆ ಧರಿಸಿ ನರ್ತಿಸಿದ್ದ ಬಗ್ಗೆ ಬೀದಿಗಿಳಿದ ಸಂಘಪರಿವಾರದವರು ಕೇಸರಿ ಬಣ್ಣವನ್ನು ಅವಮಾನಿಸುವ ಸಾಲುಗಳು ಗೀತೆಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕೆಲ ಬಲಪಂಥೀಯ ಸಂಘಟನೆಗಳು ಚಿತ್ರದ ಬಹಿಷ್ಕಾರಕ್ಕೆ ಕರೆ ನೀಡಿದ್ದು, ದೇಶದ ಕೆಲವೆಡೆ ಪ್ರತಿಭಟನೆ, ಚಿತ್ರಮಂದಿರಕ್ಕೆ ದಾಳಿಯ ನಡುವೆಯೂ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಪಠಾಣ್ ಯಶಸ್ವಿಯಾಗಿದೆ. 4 ದಿನದಲ್ಲಿ ಚಿತ್ರ ವಿಶ್ವದಾದ್ಯಂತ 429 ಕೋಟಿ ರೂ ಗಳಿಸಿದೆ.

Join Whatsapp