ಮಂಡ್ಯ: ಹಿರಿಯ ನಾಯಕರು ಚುನಾವಣಾ ರಾಜಕಾರಣದಿಂದ ದೂರವಾದರೆ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಪಕ್ಷದ ರಾಷ್ಟ್ರೀಯ ಮುಖಂಡರು ಆಲೋಚನೆ ಮಾಡಬೇಕು ಎಂದು ಸಂಸದ ಡಿ.ಬಿ.ಸದಾನಂದಗೌಡ ಹೇಳಿದ್ದಾರೆ.
ಬರ ಪರಿಸ್ಥಿತಿ ಅಧ್ಯಯನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಹಿರಿಯ ನಾಯಕರಿಗೆ ಹೆಚ್ಚು ಅನುಭವವಿರುತ್ತದೆ. ಅವರಿಗೆ ಹಿಂಬಾಲಕರ ಪಡೆಯೇ ಇರುತ್ತದೆ. ಅವರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ವರಿಷ್ಠರು ಚಿಂತನೆ ಮಾಡಬೇಕು. ನನ್ನನ್ನು ಉಪಯೋಗಿಸಿಕೊಂಡರೆ ಪಕ್ಷಕ್ಕಾಗಿ ದುಡಿಯುತ್ತೇನೆ. ಇಲ್ಲದಿದ್ದರೆ ಸುಖ ಜೀವನದಲ್ಲಿ ಇರುತ್ತೇನೆ’ ಎಂದರು.
ಸತ್ತಾಗ ನನ್ನ ಶವದ ಮೇಲೆ ಬಿಜೆಪಿ ಬಟ್ಟೆ ಹಾಕಬೇಕು ಎನ್ನುವ ರಾಜನೀತಿ ನನ್ನದಲ್ಲ. ಚುನಾವಣೆಗೆ 6 ತಿಂಗಳ ಮೊದಲೇ ನಿರ್ಧಾರ ತಿಳಿಸಿದ್ದೇನೆ. ಇದರಿಂದ ಹೊಸ ಅಭ್ಯರ್ಥಿಯನ್ನು ಹುಡುಕಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.