ಒಬ್ಬ ಗುಜರಾತಿ ದೇಶದೆಲ್ಲೆಡೆಗೆ ಹೋಗಬಹುದಾದರೆ ಬಂಗಾಳಿ ಏಕೆ ಹೋಗಬಾರದು? ಗೋವಾದಲ್ಲಿ ಮಮತಾ ಪ್ರಶ್ನೆ

Prasthutha|

ನವದೆಹಲಿ: “ಒಬ್ಬ ಗುಜರಾತಿ ದೇಶದೆಲ್ಲೆಡೆಗೆ ಹೋಗಬಹುದಾದರೆ ಬಂಗಾಳಿಯೊಬ್ಬರು ಯಾಕೆ ಹೋಗಬಾರದು?” ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಉತ್ತರ ಗೋವಾದ ಅಸ್ಸಾನೋರಾದಲ್ಲಿ ಪ್ರಶ್ನಿಸಿದ್ದಾರೆ.

- Advertisement -

“ನಾನು ಹೇಳಿದ್ದು, ನಾನೊಬ್ಬ ಬಂಗಾಳಿ. ಹಾಗಾದರೆ ಆತ ಯಾರು? ಆತನೊಬ್ಬ ಗುಜರಾತಿ. ಆತನನ್ನು ಗುಜರಾತಿ ಎಂದು ನಾವು ಹೇಳಿದ್ದರಿಂದ ಆತನು ಇಲ್ಲಿಗೆ ಬರಲಿಲ್ಲ. ಒಬ್ಬ ಬಂಗಾಳಿ ರಾಷ್ಟ್ರ ಗೀತೆ ಬರೆಯಬಲ್ಲರಾದರೆ ಒಬ್ಬ ಬಂಗಾಳಿ ಗೋವಾಕ್ಕೆ ಬರುವುದು ಸಾಧ್ಯವಿಲ್ಲವೆ? ನಾವೆಲ್ಲರೂ ಗಾಂಧೀಜಿಯನ್ನು ಗೌರವಿಸುತ್ತೇವೆ. ನಾವು ಎಂದಾದರೂ ಗಾಂಧೀಜಿಯು ಬಂಗಾಳಿಯೇ, ಬಂಗಾಳಿಯೇತರರೇ, ಗೋವಾದವರೇ ಉತ್ತರ ಪ್ರದೇಶದವರೆ ಎಂದೆಲ್ಲ ಕೇಳುತ್ತೇವೆಯೇ? ಎಲ್ಲರನ್ನು ತನ್ನ ಜೊತೆಗೆ ಕೊಂಡೊಯ್ಯುವವನು ದೇಶದ ನಾಯಕ ” ಎಂದು ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.

ಗೋವಾಕ್ಕೆ ತೃಣಮೂಲ ಕಾಂಗ್ರೆಸ್ ಬಂದಿರುವುದನ್ನು ಕೆಲವರು ಪ್ರಶ್ನಿಸುತ್ತಾರೆ. ಗೋವಾದಲ್ಲಿ ಟಿಎಂಸಿಯ ರಾಜಕೀಯವನ್ನು ಇತರ ಪಕ್ಷಗಳ ನಾಯಕರು ಪ್ರಶ್ನಿಸಿದ್ದಾರೆ. ಟಿಎಂಸಿಯು ಗೋವಾದ ನಾಯಕರನ್ನು ದೂರದಿಂದ ನಿಯಂತ್ರಿಸಲು ಬಂದಿಲ್ಲ. ಇಲ್ಲಿನ ನಾಯಕರನ್ನು ಬೆಂಬಲಿಸಲು ಬಂದಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಗುಜರಾತಿನಿಂದ ಗೋವಾವನ್ನು ನಡೆಸುವವರು ಹೇಗೆ ತಾನೇ ರಾಷ್ಟ್ರದ ನಾಯಕರಾಗಬಲ್ಲರು? “ಗೋವಾವು ಗುಜರಾತಿನಿಂದ ಇಲ್ಲವೇ ದೆಹಲಿಯಿಂದ ಆಳಲ್ಪಡಬೇಕಾಗಿಲ್ಲ. ಗೋವಾವು ಗೋವಾದವರಿಂದಲೇ ಆಳಲ್ಪಡಬೇಕು” ಎಂದೂ ಅವರು ಹೇಳಿದರು.

Join Whatsapp